Karnataka Politics : ಕೋಲಾರ ಬಿಡಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆಲ್ಲಿ – ಸಿದ್ದರಾಮಯ್ಯನವರಿಗೆ ಈಶ್ವರಪ್ಪ ಸಲಹೆ
ಸದ್ಯ ವಿಧಾನಸಭಾ ವಿಪಕ್ಷ ನಾಯಕ , ಮಾಜಿ ಸಿಎಂ ಸಿದ್ದರಾಮಯ್ಯನವರು ಮುಂಬರುವ ವಿಧಾನ ಕ್ಷೇತ್ರ ಚುನಾವಣೆಗಾಗಿ ಈಗಿನಿಂದಲೇ ಕ್ಷೇತ್ರ ಪರ್ಯಟನೆ ಆರಂಭಿಸಿದ್ದು , ಈ ಬಾರಿ ಕೋಲಾರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ..
ಈ ವಿಚಾರಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಟಾಂಟ್ ಕೊಟ್ಟಿದ್ದು , ಕೋಲಾರಕ್ಕೆ ಹೋಗ್ಬೇಡಿ.. ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ ಸಲಹೆ ಕೊಟ್ಟಿದ್ದಾರೆ..
ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ, ಬಿಡ್ತಾರೋ ನಮಗೇನೂ ಸಂಬಂಧವಿಲ್ಲ. ಒಬ್ಬ ಜನಪ್ರತಿನಿಧಿ ಯಾವ ಕ್ಷೇತ್ರದಲ್ಲಿ ಗೆದ್ದಿರ್ತಾನೋ ಅದೇ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ನಿಂತರೆ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರ್ಥ.
ಅದು ಬಿಟ್ಟು ಈ ಸಾರಿ ಒಂದು ಕ್ಷೇತ್ರ, ಮುಂದಿನ ಸಾರಿ ಇನ್ನೊಂದು ಕ್ಷೇತ್ರ, ಅದಕ್ಕೂ ಮುಂದಿನ ವರ್ಷ ಇನ್ನೊಂದು ಕ್ಷೇತ್ರ ಹೀಗೆ ಮಾಡಿದರೆ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ, ಆ ಜನರ ಪ್ರೀತಿ ವಿಶ್ವಾಸ ಗಳಿಸಿಲ್ಲ ಎಂಬ ಅಭಿಪ್ರಾಯ ಬರುತ್ತೆ ಎಂದರು.
ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೋ ಕಾರಣಕ್ಕೆ ಸೋತಿರಿ, ಯಾರ್ಯಾರಿಗೋ ಬೈದಿರಿ, ಕಾರ್ಯಕರ್ತರಿಗೆ ಕೆಲಸ ಮಾಡಿಲ್ಲ ಎಂದು ಬೈದಿರಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ತೋರಿಸಿ. ಅದು ಬಿಟ್ಟು ನನಗೆ ಅಲ್ಲಿ ಕರೀತಾರೆ, ಕೋಲಾರಕ್ಕೆ ಕರೀತಾರೆ ಅಂತ ಹೇಳಿದ್ರೆ. ಜನ ಕರೀತಾರೆ, ಮುಖ್ಯಮಂತ್ರಿ ಆಗಿದ್ದವರು ನಮಗೆ ಕೆಲಸ ಆಗಬಹುದು ಎಂಬ ನಂಬಿಕೆ, ವಿಶ್ವಾಸದ ಮೇಲೆ ಕರೆಯಬಹುದು. ಯಾವ ಕ್ಷೇತ್ರದಲ್ಲಿ ಚುನಾವಣೆ ಗೆದ್ದಿದ್ರೋ, ಯಾವ ಕ್ಷೇತ್ರದಲ್ಲಿ ಚುನಾವಣೆ ಸೋತಿದ್ರೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅದು ಪ್ರಜಾಪ್ರಭುತ್ವದ ವ್ಯವಸ್ಥೆ ಎಂದಿದ್ದಾರೆ..








