Karnataka Politics : ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ – ಈಶ್ವರಪ್ಪ
ಬಗಾಲಕೋಟೆ : ಮಾಜಿ ಸಚಿವ K. S ಈಶ್ವರಪ್ಪ ಅವರು ತಮಗೆ ಸ್ಥಾನ ಸಿಗದ ಹಿನ್ನೆಲೆ ಬಹಿರಂಗವಾಗಿಯೇ ಅಸಮಾಧನ ಹೊರಹಾಕಿದ್ಧಾರೆ..
ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ.. ಅದಕ್ಕೆ ಸೌಜನ್ಯದ ಪ್ರತಿಭಟನೆ ಎಂದು ಹೈಕಾಮಾಂಡ್ ಹಾಗೂ ಸಿಎಂ ನಡೆಗೆ ಬೇಸರ ಹೊರ ಹಾಕಿದ್ದಾರೆ..
ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲಿನ್ ಚಿಟ್ ಸಿಕ್ಕಾಗಿದೆ.. ನಿಮ್ಮನ್ನ ಮಂತ್ರಿ ಮಾಡ್ತಿವಿ ಮಂತ್ರಿ ಮಾಡ್ತೀವಿ ಅಂತ, ಇವತ್ತು ನಾಳೆ ಅಂತ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸ್ತಿದ್ದಾರೆ..
ನಿಮ್ಮಂತವರು ಮಂತ್ರಿ ಮಂಡಲದಲ್ಲಿ ಇರಬೇಕು ಅಂತ ಹೇಳ್ತಾರೆ, ಆದ್ರೆ ಯಾತಕ್ಕೆ ತಗೊಳ್ತಿಲ್ಲ ಅಂತ ಗೊತ್ತಿಲ್ಲ.. ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು, ಮಠಾಧೀಶರು ನನಗೆ ಫೋನ್ ಮಾಡ್ತಾರೆ ಯಾಕೆ ನಿಮ್ಮನ್ನ ಮಂತ್ರಿ ಮಾಡ್ತಿಲ್ಲ ಅಂತ..
ನಮಗೆಲ್ಲ ನೋವು ಆಗಿದೆ ಅಂತ ಹೇಳಿದ ಸಂಧರ್ಭದಲ್ಲಿ ನನಗೂ ನೋವು ಆಗ್ತಿದೆ ಅಪಮಾನ ಆಗ್ತಿದೆ.. ಅದನ್ನ ಅವರಿಗೆ ಅರ್ಥ ಮಾಡಿಸಬೇಕು ಅನ್ನೋ ಒಂದೇ ಕಾರಣಕ್ಕೆ ನಾನು ಒಂದು ರೀತಿಯ ಸೌಜನ್ಯ ಪ್ರತಿಭಟನೆ ಮಾಡ್ತೀನಿ ಎಂದು ಬೇಸರ ಹೊರಹಾಕಿದ್ದಾರೆ..








