Karnataka Session 2022 : ಮದ್ಯ ಮಾರಾಟ ಕೇಂದ್ರ ತೆರೆಯಲು ಅನುಮತಿ ವಿಚಾರ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರಶ್ನೆ
ಮದ್ಯ ಮಾರಾಟ ಕೇಂದ್ರ ತೆರೆಯಲು ಅನುಮತಿ ವಿಚಾರವಾಗಿ ಪರಿಷತ್ ನಲ್ಲಿ ಅಬಕಾರಿ ಸಚಿವ ಕೆ. ಗೋಪಾಲಯ್ಯಗೆ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರಶ್ನೆ ಹಾಕಿದ್ದಾರೆ… ಕುಣಿಗಲ್ ನಲ್ಲಿ ಯಾವ ಮಾನದಂಡ ಮೇರೆಗೆ ಮದ್ಯ ಮಾರಾಟ ಕೇಂದ್ರ ತೆರೆಯಲಾಗುತ್ತಿದೆ. ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಅನಧಿಕೃತ ಮದ್ಯ ಮಾರಾಟ ನಿಲ್ಲಿಸಿ. ಅಥವಾ ಅಧಿಕೃತವಾಗಿ ಗ್ರಾಮಪಂಚಾಯಿತಿಗೆ ಮಳಿಗೆ ನೀಡಿ. ಮದ್ಯ ಕುಡಿಯಬೇಡಿ ಅಂತೀರಿ ಮತ್ತೊಂದು ಕಡೆ ತೆರಿಗೆ ಹಣದ ಮೇಲೆ ಡಿಪೆಂಡ್ ಆಗ್ತೀರಿ ಎಂದು ರಂಗನಾಥ್ ಅಸಮಾಧಾನ ಹೊರಹಾಕಿದ್ದಾರೆ…
ಶಾಸಕರ ಪ್ರಶ್ನೆಗೆ ಸಚಿವ ಗೋಪಾಲಯ್ಯ ಉತ್ತರ ನೀಡಿ ಕುಣಿಗಲ್ ಕ್ಷೇತ್ರದಲ್ಲಿ ಕಳೆದ ಮೂರು ವರ್ಷದಲ್ಲಿ ಐದು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಯಾವ ಮಾನದಂಡದ ಮೇಲೆ ನೀಡಲಾಗಿದೆ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ಕೊಡಲಾಗಿದೆ. ಕುಣಿಗಲ್ ನಲ್ಲಿ ಮಹಿಳೆಯರು ಸೇರಿದಂತೆ ಶಾಸಕರು ಮನವಿ ಕೊಟ್ಟಿದ್ದಾರೆ. ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ ರೂಲ್ಸ್ 5 ರಲ್ಲಿ ಬರುತ್ತಾ ಎಂದು ಪರಿಶೀಲನೆ ನಡೆಸಿದ್ದೇವೆ. ಎಲ್ಲಿ ಪ್ರತಿಭಟನೆ ನಡೆದಿತ್ತೋ ಅಲ್ಲಿ ಮಳಿಗೆ ತೆರೆಯಲು ಅನುಮತಿ ನೀಡಿಲ್ಲ ಎಂದಿದ್ದಾರೆ..