Karnataka Sessions 2022 : ಸದನದಲ್ಲಿ ಉಗ್ರಪ್ಪ ವಿರುದ್ಧ ಇಬ್ರಾಹಿಂ ಕಿಡಿ
ನನ್ನ ಲಾಯರ್ ಆಗಿದ್ದ ಉಗ್ರಪ್ಪ. ನನ್ನ ಮೇಲೆ ಕೋಟ್ಯಾಂತರ ರೂಪಾಯಿ ಆರೋಪ ಮಾಡಿದ್ದರು. ಅವರಿಗೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದೇನೆ. ಒಂದು ಕೋಟಿ ರೂಪಾಯಿ ಮಾನನಷ್ಟ ಹಾಕಿದ್ದೇನೆ ಎಂದು ಇಬ್ರಾಹಿಂ ಹೇಳಿದ್ದಾರೆ.. ಜೊತೆಗೆ ಬಾರ್ ಕೌನ್ಸಿಲ್ ಗೆ ಮನವಿ ಮಾಡಿದ್ದೇನೆ. ನನ್ನ ವಕೀಲ್ ಆಗಿ ಕಕ್ಷಿದಾರನ ಜೊತೆ ಸರಿಯಾಗಿ ನಡೆದು ಕೊಂಡಿಲ್ಲ. ಇಂತಹವರು ಲಾಯರ್ ಆಗಲು ಸಾಧ್ಯನಾ. ವಕೀಲಗಿರಿ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡ್ತೇನೆ ಎಂದು ಕಿಡಿಕಾರಿದ್ದಾರೆ..
ಅಲ್ಲದೇ ನಾನು ಕ್ಷೇತ್ರ ರಾಜಕಾರಣ ಮಾಡಿಲ್ಲ. ಅವರು ಬೈ ಎಲೆಕ್ಷನ್ ನಲ್ಲಿ ಗೆದ್ದಿದ್ದಾರೆ. ವಿಧಿವೇಗೆ ಮದುವೆ ಮಾಡಿಸಿದ್ದೆವು.. ಅದು ಒಂದು ವರ್ಷದಲ್ಲಿ ಮಗಿದು ಹೋಯಿತು. ಬಹಿರಂಗ ಚರ್ಚೆ ಗೆ ಆಹ್ವಾನ ಕೊಟ್ಟಿದ್ದರು. ನಾನು ಬಹಿರಂಗ ಚರ್ಚೆ ಗೆ ಸಿದ್ದವಾಗಿದ್ದೇನೆ. ಚಾನಲ್ ಗೆ ಕರೀರಿ ನಾನು ಚರ್ಚೆ ಸಿದ್ದವಾಗಿದ್ದೇನೆ. ನೋಟಿಸ್ ಗೆ ಉತ್ತರ ಕೊಡಲಿ. ನಂತರದಲ್ಲಿ ಮತ್ತೆ ಮಾತಾಡುತ್ತೇನೆ ಎಂದು ಸವಾಲೆಸೆದರು…
ಅಲ್ಲದೇ ಸಲೀಂ ಜೊತೆ ಮಾತಾಡಿದ್ರು. ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಿಸಿದ್ರು. ನನಗೆ ಬೈದ್ರೆ ಕಾಂಗ್ರೆಸ್ ಸ್ಥಾನ ಸಿಗುತ್ತದೆ ಎಂದು ಈ ರೀತಿ ಮಾತಾಡುತ್ತಾರೆ.. ನಾನು ರಾಜ್ಯಸಭೆ, ಪರಿಷತ್ ಸದಸ್ಯನ್ನಾಗಿ ಕೆಲಸ ಮಾಡಿದ್ದೇನೆ. ಹಿಂದೆ ಸಚಿವನಾಗಿದ್ದಾಗ ನನ್ನ ಮೇಲೆ ಆರೋಪ ಕೇಳಿ ಬಂದಿತ್ತು. ಕೂಡಲೇ ರಾಜೀನಾಮೆ ನೀಡಿದ್ದೆ. ಯಡಿಯೂರಪ್ಪ ಸಿಎಂ ಆಗಿದ್ದರು… ಅಡ್ವಾಣಿ, ಯಡಿಯೂರಪ್ಪ ಯಾರು ಕೂಡ ನನ್ನ ಮೇಲೆ ಆರೋಪ ಮಾಡಿರಲಿಲ್ಲ ಎಂದು ಉಗ್ರಪ್ಪ ವಿರುದ್ಧ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ…








