ಕಾಶ್ಮೀರದಲ್ಲಿ ಧಮ್ ಇದ್ದರೆ ರಾಷ್ಟ್ರ ಧ್ವಜ ಹಾರಿಸಿ ಎಂದಾಗ ಕಾಂಗ್ರೆಸ್ ನವರು ಎಲ್ಲಿ ಹೋಗಿದ್ದರು : ಆರ್ ಅಶೋಕ್
ಬೆಂಗಳೂರು : ದೇಶದ ಇತಿಹಾಸದಲ್ಲೇ ರಾಷ್ಟ್ರ ಧ್ವಜಕ್ಕೆ ಇಂಥ ಅಪಮಾನ ಆಗಿಲ್ಲ . ವಿಧಾನಸಭೆಯಲ್ಲಿ ಆರು ಏಳು ಭಾರೀ ಗೆದ್ದ ಕಾಂಗ್ರೆಸ್ ಮುಖಂಡರು ಈ ರೀತಿ ಮಾಡಿದ್ದಾರೆ . ರಾಷ್ಟ್ರ ಧ್ವಜವನ್ನ ಪ್ರತಿಭಟನೆಗೆ ಬಳಸಿ ಅಪಮಾನ ಮಾಡಿದ್ದಾರೆ . ರಾಷ್ಟ್ರ ಧ್ವಜ ಕ್ಕೆ ನೀತಿ ನಿಯಮಗಳಿವೆ . ಸಂಜೆ ಒಳಗೆ ಧ್ವಜವನ್ನ ಇಳಿಸಬೇಕು . ರಾಜ್ಯದ ವಿಧಾನಸಭೆಯ ಇತಿಹಾಸದಲ್ಲಿ ಯಾವತ್ತೂ ಕೂಡ ಇಂಥದ್ದು ನಡೆದಿಲ್ಲ ಎಂದು ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ..
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ . ಜನರಿಗೆ ಮಾದರಿಯಾಗಿಬೇಕು . ಮಕ್ಕಳು ಕೂಡ ಧ್ವಜ ರೋಹಣ ಮಾಡುವಾಗ ಎದ್ದು ನಿಂತು ಗೌರವ ಕೊಡ್ತಾರೆ . ಇದು ಕಾಂಗ್ರೆಸ್ ನ ಹೀನ ಕೃತ್ಯ . ಈಶ್ವರಪ್ಪ ಬಗ್ಗೆ ಮಾತನಾಡ್ತಾಯಿದ್ದಾರೆ . ಯಾವತ್ತಿನಿಂದ ರಾಷ್ಟ್ರಧ್ವಜದ ಮೇಲೆ ಇವರಿಗೆ ಗೌರವ ಬಂತು . ಕಾಶ್ಮೀರದಲ್ಲಿ ಧಮ್ ಇದ್ದರೆ ರಾಷ್ಟ್ರ ಧ್ವಜ ಹಾರಿಸಿ ಎಂದಾಗ . ಕಾಂಗ್ರೆಸ್ ನವರು ಎಲ್ಲಿ ಹೋಗಿದ್ದರು . ಯಾವ ಬಿಲದಲ್ಲಿದ್ದರು . ಆ ಫೈರ್, ಗನ್ ಗಳ ಮಧ್ಯೆ ಹೋಗಿ ಹಾರಿಸಿದ್ದು ಬಿಜೆಪಿ ಕಾರ್ಯಕರ್ತರು. ಸಂವಿಧಾನವನ್ನೇ ಸರಿಸಿದವರು ಇವರು . ಈಶ್ವರಪ್ಪಗೆ ಪಾಠ ಮಾಡ್ತಾಯಿದ್ದಾರೆ . ಕಾಂಗ್ರೆಸ್ ನ ನಕಲಿ ನಾಟಕ ರಾಜ್ಯದ ಜನೆತೆಗೆ ಗೊತ್ತಿದೆ . ರಾಷ್ಟ್ರ ಧ್ವಜದ ಅವಮಾನವನ್ನ ಯಾರೂ ಒಪ್ಪಲ್ಲ ಎಂದಿದ್ದಾರೆ..








