ಇಡೀ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಮಹಾಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ನದಿಗಳೆಲ್ಲಾ ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. ಮಲೆನಾಡು , ಕರಾವಳಿ, ಹಾಸನ ಸಕಲೇಶಪುರ ಭಾಗಗಳಲ್ಲಿ ಮಳೆ ಆರ್ಭಟ ಕೊಂಚ ಜೋರಾಗಿಯೇ ಇದೆ. ಇನ್ನೂ ಹಾಸನ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ವಿಚಾರವಾಗಿ ಸಚಿವ ಗೋಪಾಲಯ್ಯ ಅವರು ವಿಧಾನಸೌಧದಲ್ಲಿ ಮಾತನಾಡಿದ್ದಾರೆ.
“ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಸಕಲೇಶಪುರದಲ್ಲಿ ಮರಗಳು ಬಿದ್ದು ಹೋಗಿವೆ. ಪ್ರಾಣಹಾನಿಯಾಗಿದ್ದರೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಹಾಸನ ಕೊಬ್ಬರಿ ಬೆಳೆಗಾಗರಿಗೆ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಇಂದು ನಿರ್ಧಾರ ಮಾಡಲಾಗಿದೆ “ಎಂದು ಆಹಾರ ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಅವರು ತಿಳಿಸಿದ್ದಾರೆ.








