Karnataka State Rural Livelihood Development Corporation Recruitment 2025 – ಕರ್ನಾಟಕ ಸರ್ಕಾರ ಸ್ವಾಮ್ಯದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಲ್ಲಿ ಖಾಲಿ ಇರುವ 12 ಕ್ಲಸ್ಟರ್ ಮೇಲ್ವಿಚಾರಕರು, ಬ್ಲಾಕ್ ಮ್ಯಾನೇಜರ್, ಡಿಸ್ಟ್ರಿಕ್ಟ್ ಮ್ಯಾನೇಜರ್ , ಆಫೀಸ್ ಅಸಿಸ್ಟೆಂಟ್ ಮತ್ತು ತಾಲೂಕ ಪ್ರೋಗ್ರಾಮ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರಗಳು
ಇಲಾಖೆ ಹೆಸರು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 12
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಕರ್ನಾಟಕ
ಹುದ್ದೆಗಳ ವಿವರ
ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆ 1
ಜಿಲ್ಲಾ ವ್ಯವಸ್ಥಾಪಕರು 1
ಕಛೇರಿ ಸಹಾಯಕ 1
ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್ಸ್ 3
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯಗಳು 1
ಕ್ಲಸ್ಟರ್ ಮೇಲ್ವಿಚಾರಕರು 5
ವಿದ್ಯಾರ್ಹತೆ
ಜಿಲ್ಲಾ ವ್ಯವಸ್ಥಾಪಕ ( ಕೌಶಲ್ಯ ಮತ್ತು ಆರ್ಥಿಕ ಒಳಗೊಂಡಿಕೆ) – ಈ ಹುದ್ದೆಗೆ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, MBA (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಅಥವಾ M.Com (ಮಾಸ್ಟರ್ ಆಫ್ ಕಾಮರ್ಸ್) ಪಡೆದಿರಬೇಕು.
ಜಿಲ್ಲಾ ವ್ಯವಸ್ಥಾಪಕ – ಈ ಹುದ್ದೆಗೆ ಅಭ್ಯರ್ಥಿಗಳು B.Sc (ಬ್ಯಾಚುಲರ್ ಆಫ್ ಸೈನ್ಸ್) ಅಥವಾ M.Sc (ಮಾಸ್ಟರ್ ಆಫ್ ಸೈನ್ಸ್) ಪದವಿಧಾರರಾಗಿರಬೇಕು.
ಕಚೇರಿ ಸಹಾಯಕ (Office Assistant) – ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಪದವಿ (Graduation) ಹೊಂದಿರಬೇಕು.
ಬ್ಲಾಕ್ ವ್ಯವಸ್ಥಾಪಕ – ಕೃಷಿ ಜೀವನೋಪಾಯ (Farm Livelihoods) – ಈ ಹುದ್ದೆಗೆ B.Sc, M.Sc ಅಥವಾ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಬ್ಲಾಕ್ ವ್ಯವಸ್ಥಾಪಕ – ಕೃಷಿಯೇತರ ಜೀವನೋಪಾಯ (Non-Farm Livelihoods) – ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಹೊಂದಿರಬೇಕು.
ಕ್ಲಸ್ಟರ್ ಮೇಲ್ವಿಚಾರಕ (Cluster Supervisor) – ಈ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಪದವಿ (Graduation) ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನಶ್ರೇಣಿ
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19-ಫೆಬ್ರುವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-ಮಾರ್ಚ್-2025
Website:https://jobsksrlps.karnataka.gov.in/