Karthikeya – 3 – 3Dಯಲ್ಲಿ ಕಾರ್ತಿಕೇಯ – 3 ಸಿನಿಮಾ
ಕಾರ್ತಿಕೇಯ 2 ಸಿನಿಮಾದೊಂದಿಗೆ ಹೀರೋ ನಿಖಿಲ್ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಂಡಿದ್ದಾರೆ.
ಚಂದು ನಿರ್ದೇಶನದ ಈ ಸಿನಿಮಾದಲ್ಲಿ ಅನುಪಮ ಪರಮೇಶ್ವರನ್ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದರು.
ಪಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಸದ್ದು ಮಾಡಿದ ಈ ಸಿನಿಮಾ ಬರೋಬ್ಬರಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ನಿಖಿಲ್ ಕೆರಿಯರ್ ನಲ್ಲಿಯೇ ಈ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಗಿದೆ. ನಾರ್ಥ್ ಆಡಿಯನ್ಸ್ ಗೂ ಹೆಚ್ಚು ಕನೆಕ್ಟ್ ಆಗಿತ್ತು.

ಹೀಗಾಗಿಯೇ ಕಾರ್ತಿಕೇಯ ಸಿನಿಮಾದ ಸೀಕ್ವೆಲ್ ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.
ಇದೀಗ ಈ ಬಗ್ಗೆ ಸಿನಿಮಾದ ಹೀರೋ ನಿಖಿಲ್ ಹೊಸ ಅಪ್ ಡೇಟ್ ನೀಡಿದ್ದಾರೆ.
ಶೀಘ್ರದಲ್ಲಿಯೇ ಇದಕ್ಕೆ ಸಂಬಂಧಿಸಿದಂತೆ ಶೂಟಿಂಗ್ ಮಾಡಲಿದ್ದೇವೆ.
ಅದಷ್ಟೆ ಅಲ್ಲದೇ ಕಾರ್ತಿಕೇಯ 3 ಸಿನಿಮಾ 3ಡಿಯಲ್ಲಿ ಬರಲಿದೆ ಎಂದು ಹೇಳಿದ್ದಾರೆ.







