ಬಾಲಿವುಡ್ ನ ಯುವ ನಟ , ಲಕ್ಷಾಂತರ ಮಹಿಳಾ ಅಭಿಮಾನಿಗಳ ಕ್ರಶ್ , ಬಾಲಿವುಡ್ ಯೂತ್ ಐಕಾನ್ ಆಗಿರುವ ಕಾರ್ತಿಕ್ ಆರ್ಯನ್ ಸದ್ಯ ಭೂಲ್ ಭುಲಯ್ಯ 2 ಸಿನಿಮಾದ ಸಕ್ಸಸ್ ನ ಸಂತಸದಲ್ಲಿದ್ಧಾರೆ.
ಅಲ್ಲದೇ ಈ ಸಿನಿಮಾದ ಸಕ್ಸಸ್ ನಂತರ ಅವರು ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.. ಹೌದು ಸೌತ್ ಸಿನಿಮಾಗಳ ಮುಂದೆ ಸೋತು ಸುಣ್ಣವಾಗಿರುವ ಬಾಲಿವುಡ್ ಸಾಲು ಸಾಲು ಫ್ಲಾಪ್ ಗಳಿಂದ ಕಂಗೆಟ್ಟು ಹೋಗಿದ್ದಂತಹ ಸಂದರ್ಭದಲ್ಲೇ ಹೊಸ ಬೆಳಕಾಗಿ ಬಂದದ್ದು ಭೂಲ್ ಭುಲಯ್ಯ 2 ಸಿನಿಮಾ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಜಾದು ಮಾಡ್ತಿದೆ..
ಈ ಸಿನಿಮಾದ ಸಕ್ಸಸ್ ನ ನಂತರ ಕಾರ್ತಿಕ್ ಆರ್ಯನ್ ಸಂಭಾವನೆ ದುಪ್ಪಟ್ಟಾಗಿದೆ.. ಹೌದು ಭೂಲ್ ಭುಲಯ್ಯ 2 ಸಿನಿಮಾ ಇಲ್ಲಿಯವರೆಗೂ 92.10 ಕೋಟಿ ಗಳಿಸಿದೆ. ಭೂಲ್ ಭುಲಯ್ಯ 2 ಸೂಪರ್ ಹಿಟ್ ಆಗಿದೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಅಭಿನಯದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿದೆ. ಮೊದಲ ವಾರದಲ್ಲಿ 92.10 ಕೋಟಿ ಗಳಿಸಿದೆ ಎಂದು ವರದಿ ಆಗಿದೆ.
ಕಾರ್ತಿಕ್ ಆರ್ಯನ್ ಭೂಲ್ ಭುಲಯ್ಯ 2 ಸಿನಿಮಾಗೂ ಮೊದಲು 15 ರಿಂದ 20 ಕೋಟಿ ತನಕ ಸಂಭಾವನೆ ಪಡೆದುಕೊಳ್ಳುತ್ತಾ ಇದ್ದರು. ಈಗ ಸಿನಿಮಾದ ಯಶಸ್ಸಿನ ಬಳಿಕ ಕಾರ್ತಿಕ್ ಆರ್ಯನ್ ಸಂಭಾವನೆ ದುಪ್ಪಟ್ಟು ಆಗಿದೆ. ಸದ್ಯ ಕಾರ್ತಿಕ್ ತಮ್ಮ ಸಂಭಾವನೆಯನ್ನು 35 ರಿಂದ 40 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.







