ಬೆಂಗಳೂರು : ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಬ್ಬರ ಮುಂದುವರಿಯುತ್ತಲೇ ಇದೆ. ಇದರ ಮಧ್ಯೆ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ಜಾರಿ ಮಾಡಿದೆ. ಅದರಂತೆ ಇವತ್ತು ರಾತ್ರಿಯಿಂದಲೇ ಕರ್ನಾಟಕ ಸ್ತಬ್ಧವಾಗಲಿದೆ.
ಇಂದು ರಾತ್ರಿ 8 ಗಂಟೆಯಿಂದ ಸಂಡೇ ಕರ್ಫ್ಯೂ ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ತುರ್ತು, ಅಗತ್ಯ ಸೇವೆ ಹೊರತುಪಡಿಸಿ ಉಳಿದವೆಲ್ಲಾ ಕಂಪ್ಲೀಟ್ ಬಂದ್ ಆಗಲಿದೆ.
ಹಾಗಾದ್ರೆ ನಾಳೆ ಏನಿರುತ್ತೆ..? ಏನಿರಲ್ಲ ಎಂಬೋದನ್ನ ನೋಡೋದಾದ್ರೆ..
ನಾಳೆ ಏನಿರುತ್ತೆ?
* ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಮಾಧ್ಯಮಗಳಿಗೆ ಅವಕಾಶ
* ಮಾಂಸದ ಅಂಗಡಿಗಳು ನಾಳೆ ಓಪನ್ ಇರುತ್ತೆ
* ಹಣ್ಣು, ತರಕಾರಿ, ದಿನಸಿ ಪದಾರ್ಥ ಖರೀದಿಗೆ ಅವಕಾಶ ಕೊಡಲಾಗಿದೆ
* ಎಂದಿನಂತೆ ಡಾಕ್ಟರ್ಸ್, ನರ್ಸ್ ಗಳಿಗೆ ಆಂಬುಲೆನ್ಸ್, ಓಡಾಟ ಇರುತ್ತೆ.
* ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ
ನಾಳೆ ಏನಿರಲ್ಲ?
* ನಾಳೆ ಆಟೋ, ಕ್ಯಾಬ್, ಬೈಕ್ ರಸ್ತೆಗಿಳಿಯಲ್ಲ
* ಬಾರ್, ಸೆಲೂನ್, ಬ್ಯೂಟಿ ಪಾರ್ಲರ್, ಪಾರ್ಕ್ ಬಂದ್
* ಗಾರ್ಮೆಂಟ್ಸ್, ಫ್ಯಾಕ್ಟರಿ, ಕಾರ್ಖಾನೆಗಳು, ಕಂಪನಿಗಳು
* ಮದ್ಯದಂಗಡಿ ಸಂಪೂರ್ಣ ಬಂದ್ ಆಗಿರುತ್ತವೆ
* ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಓಡಲ್ಲ
* ಹೋಟೆಲ್ ಗಳು (ಪಾರ್ಸಲ್ ಗೆ ಅವಕಾಶ ಇದೆ)








