ಅಫ್ಗಾನ್ ನಿಂದ ಪಾಠ ಕಲಿತುಕೊಳ್ಳಿ… ನಮ್ಮನ್ನ ಪರೀಕ್ಷೆ ಮಾಡಬೇಡಿ…! ಕೇಂದ್ರಕ್ಕೆ ಮಫ್ತಿ ಎಚ್ಚರಿಕೆ ನೀಡಿದ್ದು ಯಾವ ಅರ್ಥದಲ್ಲಿ..?
ಕಾಶ್ಮೀರ : ಒಂದೆಡೆ ಅಫ್ಗಾನ್ ನರಭಕ್ಷಕರ ಅಡಿ ಸಿಲುಕಿ ಸ್ಮಶಾಣವಾಗಿದೆ. ಮತ್ತೊಂದೆಡೆ ಇದೇ ವವಿಚಾರವಾಗಗಿ ಜಗತ್ತಿನಾದ್ಯಂತ ಚರ್ಚೆಗಳು ನಡೆಯುತ್ತಿವೆ.. ಇದಕ್ಕೆ ಭಾರತವೂ ಹೊರತಾಗಿಲ್ಲ.. ಆದ್ರೆ ಕಾಶ್ಮೀರದಲ್ಲಿ ಮಾಜಿ ಸಿಎಂ ಮೆಹಬೂಬಾ ಮಫ್ತಿ ಕೇವಲ ಈ ಬಗ್ಗೆ ಮಾತನಾಶಡಿದ್ದಷ್ಟೇ ಅಲ್ಲ ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.. ಹೌದು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪಿಸುವಂತೆ ಆಗ್ರಹಿಸಿರುವ ಮಫ್ತಿ ಮೇಡಂ ತಾಲಿಬಾನಿಗಳ ಉದಾಹರಣೆ ಕೊಟ್ಟು ಎಚ್ಚರಿಕೆ ನೀಡಿರೋದು ಯಾವ ಅರ್ಥದಲ್ಲಿ ಅನ್ನೋದೇ ಈಗ ಸವಾಲಾಗಿದೆ..
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿ ಮಾತನಾಡಿರುವ ಅವರು ನಮ್ಮನ್ನು ಪರೀಕ್ಷಿಸಬೇಡಿ. ಸರ್ಕಾರ ಮಾರ್ಗಗಳನ್ನು ಸರಿಪಡಿಸಿಕೊಂಡು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಪಕ್ಕದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಸೂಪರ್ ಪವರ್ ಆಗಿರುವ ಅಮೆರಿಕ ಗಂಟು ಮೂಟೆ ಕಟ್ಟಿಕೊಂಡು ಪಲಾಯನ ಮಾಡಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ರೀತಿ ಜಮ್ಮು ಕಾಶ್ಮೀರದೊಂದಿಗೆ ಮಾತುಕತೆ ನಡೆಸಲು ನಿಮಗೆ ಇನ್ನೂ ಸಮಯವಿದೆ. ಜಮ್ಮು ಕಾಶ್ಮೀರವನ್ನು ಕಾನೂನುಬಾಹಿರವಾಗಿ ಮತ್ತು ಅಸಂವಿಧಾನಿಕವಾಗಿ ಕಿತ್ತುಕೊಳ್ಳುವುದು. ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿರುವ ನಿಮ್ಮ ತಪ್ಪನ್ನು ತಕ್ಷಣ ಸರಿಪಡಿಸಿ, ತಡವಾದರೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ನಮ್ಮಿಂದ ಕಸಿದುಕೊಂಡಿರುವುದನ್ನು ಹಿಂದಿರುಗಿಸಬೇಕು. ಕಾಶ್ಮೀರ ಸಮಸ್ಯೆಯನ್ನು ಜಮ್ಮು ಕಾಶ್ಮೀರದ ಜನರ ಆಶಯಗಳು ಹಾಗೂ ಆಕಾಂಕ್ಷೆಗಳ ಪ್ರಕಾರ ಪರಿಹರಿಸಬೇಕು ಎಂದು ಹೇಳಿದ್ದಾರೆ. ಗನ್ ಹಾಗೂ ಕಲ್ಲುಗಳನ್ನು ಹಿಡಿಯುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ತಾಲಿಬಾನಿಗಳು ಇದೀಗ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಈ ಮೂಲಕ ಅಮೆರಿಕ ಪಲಾಯನ ಮಾಡುವಂತೆ ಮಾಡಿದ್ದಾರೆ. ಇಡೀ ವಿಶ್ವ ಅವರತ್ತ ನೋಡುತ್ತಿದೆ. ಅವರು ಹೇಗೆ ವರ್ತಿಸುತ್ತಿದ್ದಾರೆ. ಹೇಗೆ ಕಟ್ಟುನಿಟ್ಟು ಪಾಲಿಸುತ್ತಾರೆ, ಜನರೊಂದಿಗೆ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಯುವಕರು ಶಸ್ತ್ರಾಸ್ತ್ರಗಳನ್ನು ಹಿಡಿಯಬಾರದು. ಗನ್ ಹಾಗೂ ಕಲ್ಲುಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಫ್ಘಾನಿಸ್ತಾದ ಪರಿಸ್ಥಿತಿ ಜಮ್ಮು ಕಾಶ್ಮೀರದ ಜನರಿಗೆ ಪಾಠವಾಗಬೇಕು. ಯುವಕರು ಜೀವಗಳನ್ನು ಕಾಪಾಡಿಕೊಳ್ಳಬೇಕು. ನೀವು ಜೀವಗಳನ್ನು ಕಳೆದುಕೊಂಡರೆ ಎಲ್ಲವೂ ಮುಗಿದಂತೆ ಎಂದು ಎಚ್ಚರಿಸಿದ್ದಾರೆ.
ಮೆಹಬೂಬಾ ಮುಫ್ತಿ ಅವರ ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ನೆಲೆಯನ್ನು ಕಳೆದುಕೊಂಡ ಬಳಿಕ ಹತಾಶೆಯಿಂದ ದ್ವೇಷದ ರಾಜಕಾರಣದಲ್ಲಿ ತೊಡಗಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಪಿತೂರಿ ಮಾಡುವವರು ನಾಶವಾಗುತ್ತಾರೆ ಎಂದು ಹೇಳಿದೆ.








