ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಭರ್ಜರಿ ಯಶಸ್ಸು ಪಡೆಯುತ್ತಿದ್ದು, 100 ಕೋಟಿ ರೂ. ಕ್ಲಬ್ ಸೇರಿದೆ.
ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಇಲ್ಲಿಯವರೆಗೆ 104 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ಚಿತ್ರ ಗೆದ್ದು ಭರ್ಜರಿಯಾಗಿ ಬೀಗುತ್ತಿದೆ.
ಕೇವಲ ಒಂದೇ ವಾರಕ್ಕೆ ಚಿತ್ರ ನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುವುದು ಕೂಡ ವಿಶೇಷವಾಗಿದ್ದು, ದಚ್ಚು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸದ್ಯದ ಮಾಹಿತಿಯಂತೆ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಕಾಟೇರ’ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ತಂಡದ ಖುಷಿ ಹೆಚ್ಚಿಸಿದೆ. ಈಗ ಟಾಲಿವುಡ್ ಹಾಗೂ ಕಾಲಿವುಡ್ನಲ್ಲೂ ‘ಕಾಟೇರ’ ಕುರಿತು ಚರ್ಚೆಯಾಗುತ್ತಿದೆ.
ಡಿಸೆಂಬರ್ 29: 19.79 ಕೋಟಿ ರೂ.
ಡಿಸೆಂಬರ್ 30: 17.35 ಕೋಟಿ ರೂ.
ಡಿಸೆಂಬರ್ 31: 20.94 ಕೋಟಿ ರೂ.
ಜನವರಿ 1: 18.26 ಕೋಟಿ ರೂ.
ಜನವರಿ 2: 9.24 ಕೋಟಿ ರೂ.
ಜನವರಿ 3: 9.78 ಕೋಟಿ ರೂ.
ಜನವರಿ 4: 9.52 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಇಲ್ಲಿಯವರೆಗೂ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿವೆ. ಈ ಚಿತ್ರದಲ್ಲಿ ನಾಯಕಿಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ. ಈ ಮೂಲಕ ಆರಾಧನಾ ಮೊದಲ ಚಿತ್ರದಲ್ಲಿಯೇ ಗೆದ್ದು ಬೀಗಿದ್ದಾಳೆ.








