ಮದುವೆಯ ಒಂದೊಂದೇ ಶಾಸ್ತ್ರಗಳ ಫೋಟೋಗಳನ್ನ ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ತಾಯಿದ್ದಾರೆ.. ಮದುವೆ ಫೋಟೋ ನಂತರ ಇತ್ತೀಚೆಗೆ ಅರಿಶಿಣ ಶಾಸ್ತ್ರದ ಫೋಟೋಗಳನ್ನ ಹಂಚಿಕೊಂಡಿದ್ದರು.. ಈಗ ಮೆಹಂದಿ ಶಾಸ್ತ್ರದ ಫೋಟೋಗಳನ್ನ ಹಂಚಿಕೊಂಡಿದ್ದಾರೆ..
ರಾಜಸ್ಥಾನದ ಐಶಾರಾಮಿ ಹೋಟೆಲ್ ಸಿಕ್ಸ್ ಸೆನ್ಸಸ್ ನಲ್ಲಿ ಬಾಲಿವುಡ್ ನ ಸ್ಟಾರ್ ಕಪಲ್ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.. ಆದ್ರೆ ಇವರ ಮದುವೆಯ ವಿಚಾರವನ್ನ ಬಹಳ ಗೌಪ್ಯವಾಗಿಡಲಾಗಿತ್ತು.. ಮದುವೆಯ ನಂತರ ಈ ಜೋಡಿ ಅಧಿಕೃತವಾಗಿ ಮದುವೆ ವಿಚಾರವನ್ನ ಘೋಷಣೆ ಮಾಡುವ ವರೆಗೂ ಈ ಬಗ್ಗೆ ಇಬ್ಬರೂ ಕೂಡ ಎಲ್ಲೂ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ..
ಅಲ್ಲದೇ ಇವರ ಮದುವೆಗೆ ಬಂದಿದ್ದ ಅತಿಥಿಗಳೂ ಕೂಡ ಸಾಕಷ್ಟು ಗೌಪತ್ಯೆ ಕಾಪಾಡಿದ್ದರು.. ಇದು ಸಾಲದಕ್ಕೆ ಇವರ ಮದುವೆಗೆ ಆಗಮಿಸುವ ಅತಿಥಿಗಳು ಮೊಬೈಲ್ ಬಳಸದಂತೆ ನಿಯಮವನ್ನೂ ವಿಧಿಸಲಾಗಿತ್ತು.. ಇಷ್ಟ್ ಟೈಟ್ ಸೆಕ್ಯುರಿಟಿ , ಗೌಪ್ಯತೆ ನಡುವೆ ವಿಕ್ಕಿ ಕೌಶಾಲ್ ಕ್ಯಾಟ್ ಮದುವೆಯ ಫೋಟೋಗಳು ವಿಡಿಯೋಗಳು ಎಲ್ಲೂ ವೈರಲ್ ಆಗೋಕೆ ಬಿಟ್ಟಿಲ್ಲ.. ಮದುವೆ ನಂತರ ಕ್ಯಾಟ್ – ವಿಕ್ಕಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದು ಬಿಟ್ರೆ.. ಇದು ಇವರ ಮದುವೆಯ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಲೇ ಹೋಯ್ತು..
ಕತ್ರೀನಾ–ವಿಕ್ಕಿ ಸಂಬಂಧಿಗಳು ಮತ್ತು ಆಪ್ತರು ಸೇರಿದಂತೆ ಕೇವಲ 120 ಮಂದಿಗೆ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಮಾರಂಭಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು. ಅಂದ್ಹಾಗೆ ವಿಕ್ಕಿ ಕೌಶಾಲ್ ಮದುವೆಯ ವಿಡಿಯೋ ಕ್ಲಿಪ್ ನ ಖ್ಯಾತ ott ಪ್ಲಾಟ್ ಫಾರ್ಮ್ ಅಮೇಜಾನ್ ಪ್ರೈಮ್ ಬರೋಬ್ಬರಿ 80 ಕೋಟಿ ರೂಪಾಯಿಗೆ ಕೊಂಡುಕೊಂಡಿರೋ ಮಾಹಿತಿ ಲಭ್ಯವಾಗಿದೆ..