Madikeri – ಅಕ್ಟೋಬರ್ 21 ರಂದು ಕಾವೇರಿ ನದಿ ಉತ್ಸವ
ಮಡಿಕೇರಿ : ಅಕ್ಟೋಬರ್ 21 ರಂದು ಕಾವೇರಿ ನದಿ ಉತ್ಸವ ಕೊಡಗಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ.
ಇತ್ತೀಚೆಗೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ನೇತೃತ್ವದ ಕಾವೇರಿ ನದಿ ಸ್ವತ್ಛತಾ ಆಂದೋಲನ ಸಮಿತಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾವೇರಿ ನದಿ ಉತ್ಸವದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ತಲಕಾವೇರಿ, ಭಾಗಮಂಡಲ, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಉತ್ಸವ ನಡೆಯಲಿದೆ.
ಕಳೆದ ವರ್ಷ ಕಾರಣಾಂತರಗಳಿಂದ ಕಾವೇರಿ ನದಿ ಉತ್ಸವವನ್ನು ಮುಂದೂಲ್ಪಟ್ಟಿತ್ತು.