ಸಾಹಿತಿ ಕವಿರಾಜ್
ಸಾಹಿತಿ ಕವಿರಾಜ್ ಅವರು ಅಗಲಿದ “ಸ್ವರ ಕೋಗಿಲೆ”ಯ ಬಗ್ಗೆ ಬಾವಪೂರ್ವವಾಗಿ ಮಾತಾಡಿದ್ದಾರೆ.
“ ಕನ್ನಡ ಸಿನಿಮಾದಲ್ಲಿ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ.
ನಾನು ಬರೆದ ‘ಗರನೆ.. ಗರಗರನೆ…’, ‘ಚಾಮುಂಡಿ ತಾಯಿಯಾಣೆ…’
ಹೀಗೆ ಸುಮಾರು 50ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿ, ಅದನ್ನು ಜನರ ಬಾಯಲ್ಲಿ ಗುನುಗುಡುವಂತೆ ಮಾಡಿದ ಮಹಾನ್ ಗಾಯಕ.
ಎದುರು ಸಿಕ್ಕಾಗಲೆಲ್ಲ ಆತ್ಮೀಯ ಅಪ್ಪುಗೆಯ ಮೂಲಕ ಪ್ರೀತಿ ತೋರಿಸುತ್ತಿದ್ದ, ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದಂತಹ ಎಸ್‌ಪಿಬಿ ನಮ್ಮ ನಡುವೆಯೇ ಸಾಧನೆಯ ಮೇರು ಶಿಖರವೇರಿದ ಸಾಧಕ.
ಇವತ್ತು ಅವರಿಲ್ಲ ಅಂದರೆ, ನಂಬಲಾಗುತ್ತಿಲ್ಲ. ಸಂಗೀತ ಕ್ಷೇತ್ರದ ಮಟ್ಟಿಗೆ ನಿಜವಾದ ಅರ್ಥದಲ್ಲಿ ಇದು ತುಂಬಲಾರದ ನಷ್ಟ.
ಕನ್ನಡದ ಮಟ್ಟಿಗೆ ಎಸ್‌ಪಿಬಿ ದೈಹಿಕವಾಗಿ ಇಲ್ಲದಿದ್ದರೂ, ಹಾಡುಗಳ ಮೂಲಕ ಯಾವತ್ತೂ ಜೀವಂತವಾಗಿರುತ್ತಾರೆ.
ಕನ್ನಡ ಚಿತ್ರರಂಗ, ಸಂಗೀತ ಕ್ಷೇತ್ರ, ಕೇಳುಗರು ಎಲ್ಲರಿಗೂ ಹೃದಯ ಭಾರವಾಗಿದೆ” ಎಂದು ಕಂಬನಿ ಮಿಡಿದ್ದಾರೆ.