ಹಾಸನ: ಕೆಇಬಿ ನೌಕರನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಹಾಸನದ ಅರೆಕಲ್ಲು ಹೊಸಳ್ಳಿ ಗ್ರಾಮದ ಸಂತೋಷ್ ಕೊಲೆಯಾದ ಕೆಇಬಿ ನೌಕರ.
ಹಾಸನ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯ ಹೂವಿನಳ್ಳಿಯ ಬಯಲು ಪ್ರದೇಶದಲ್ಲಿ ತಡರಾತ್ರಿ ಸಂತೋಷ್ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದಾರೆ. ಎಣ್ಣೆ ಪಾರ್ಟಿ ವೇಳೆ ಸ್ನೇಹಿತರೇ ಗುಂಡು ಹೊಡೆದು ಸಂತೋಷ್‍ನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮೃತದೇಹ ಸುತ್ತಮುತ್ತ ಊಟದ ಪೊಟ್ಟಣ, ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಈಡಾಗಿದೆ. ಕೆಲವು ವರ್ಷಗಳ ಹಿಂದೆ ಸಂತೋಷ್ ತಂದೆ ಕೆಇಬಿ ಇಲಾಖೆ ಸೇವೆಯಲ್ಲಿರುವಾಗಲೇ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಸಂತೋಷ್ ಗೆ ಕೆಇಬಿಯಲ್ಲಿ ಕೆಲಸ ದೊರಕಿತ್ತು. ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








