ಹಣ ಪಡೆದಿರೋದು ಸಾಬೀತಾದ್ರೆ ಕೈ ಕಡಿದುಕೊಳ್ತೇವೆ : ಕೇದಾರ ಜಗದ್ಗುರು
ದಾವಣಗೆರೆ : ಉಜ್ಜಿನಿ ಪೀಠಾಧಿಪತಿ ವಿಚಾರದಲ್ಲಿ ನಾವು ಯಾರಿಂದಲೂ ಹಣ ಪಡೆದಿಲ್ಲ. ಒಂದು ವೇಳೆ ಹಣ ಪಡೆದಿರೋದು ಸಾಬೀತಾದ್ರೆ ನಾವು ಮತ್ತು ರಂಭಾಪುರಿ ಶ್ರೀಗಳು ಕೈ ಕಡಿದುಕೊಳ್ಳುತ್ತೇವೆ ಎಂದು ಕೇದಾರ ಜಗದ್ಗುರು ಹೇಳಿದ್ದಾರೆ.
ಉಜ್ಜಿನಿ ಜಗದ್ಗುರುಗಳನ್ನು ಪೀಠದಿಂದ ಕೆಳಗಿಳಿಸುವ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಅವರು, ಉಜ್ಜಿನಿ ಜಗದ್ಗುರುಗಳನ್ನು ಪೀಠದಿಂದ ಕೆಳಗಿಳಿಸುವ ಚಿಂತನೆ ಮಾಡಿಲ್ಲ.
ಈ ವಿಚಾರವಾಗಿ ನಾವು ಯಾರಿಂದಲೂ ಹಣ ಪಡೆದಿಲ್ಲ. ಹಣ ಪಡೆದಿರುವುದು ಸಾಬೀತು ಮಾಡಿದ್ರೆ, ನಾವು ಮತ್ತು ರಂಭಾಪುರಿ ಶ್ರೀಗಳು ಕೈ ಕಡಿದುಕೊಳ್ಳುತ್ತೇವೆ.
ಕಾಶಿ ಪೀಠದ ಜಗದ್ಗುರು ಹೇಳಿದ್ದು ಸುಳ್ಳಾದರೆ ನಾಲಿಗೆ ಕತ್ತರಿಸಿಕೊಳ್ಳಲಿ, ಇಲ್ಲವಾದರೆ ತೆಪ್ಪಗೆ ಇರಲಿ ಎಂದು ಎಚ್ಚರಿಕೆ ನೀಡಿದರು.
ಸದ್ಯದ ಸಮಸ್ಯೆ ಪರಿಹಾರಕ್ಕೆ ಪಂಚ ಪೀಠದ ಪರಂಪರೆ, ನಿಯಮಾವಳಿಯಂತೆ ನಡೆದುಕೊಳ್ಳುವುದೊಂದೆ ಏಕೈಕ ಮಾರ್ಗವಾಗಿದೆ.
ನಿಯಮ ಕಲಿಯದ ಪರಿಣಾಮ ಇಂಥಹ ಪರಿಸ್ಥಿತಿ ಎದುರಾಗಿದೆ. ಯಾರೇ ಆದರೂ ಗುರುವಿಗೆ ಕೊಟ್ಟ ವಚನವನ್ನು ಮೀರಬಾರದು. ಯಾರಾದ್ರೂ ವಚನವನ್ನು ಮೀರಿದರೆ, ಈ ರೀತಿಯ ರಾಜಕೀಯ ಬೆಳವಣೆಗೆಯಾಗುತ್ತದೆ.
ಉಜ್ಜಿನಿ ಪೀಠದ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವ ವಿಚಾರ ಕಾಶಿ ಪೀಠದ ಜಗದ್ಗುರುಗಳಿಂದಾಗಿ ಬಹಿರಂಗವಾಗಿದೆ. ಇದರಿಂದ ನಾವು ಕೂಡ ಮಾಧ್ಯಮದ ಮುಂದಿನ ಬರಬೇಕಾಯಿತು ಎಂದು ವಿವರಿಸಿದ್ರು.
ಇನ್ನ ಪಂಚ ಪೀಠಗಳು ಶಾಶ್ವತ ಎಂದ ಕೇದಾರಿ ಜಗದ್ಗುರುಗಳು, ಪೀಠಗಳನ್ನು ಅಲಂಕರಿಸುವ ವ್ಯಕ್ತಿಗಳು ಶಾಶ್ವತವಲ್ಲ. ಪೀಠದ ಪರಂಪರೆ ಎಂದಿಗೂ ಅಮರ. ವ್ಯಕ್ತಿಗತ ದೋಷಗಳನ್ನು ವ್ಯಕ್ತಿಗಳೇ ತಿದ್ದಿಕೊಳ್ಳಬೇಕು, ಪಂಚ ಪೀಠಗಳಲ್ಲಿ ಯಾವುದೇ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿದರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel