ನವದೆಹಲಿ: ಜಾಮೀನು ಕೋರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supremecourt) ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಪ್ರತಿಕ್ರಿಯೆ ನೀಡಲು ಸಿಬಿಐಗೆ ಒಂದು ವಾರದ ಕಾಲಾವಕಾಶ ನೀಡಿದೆ.
ಸಿಬಿಐ(Central Bureau Of Investigation) ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಂಟರ್ ಅಫಿಡವಿಟ್ ಸಲ್ಲಿಸಿದೆ. ಇದರಲ್ಲಿ ವಿವಾದಾತ್ಮಕ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೇಜ್ರಿವಾಲ್ ಬಂಧನ ಕಾನೂನು ಬದ್ಧವಾಗಿದೆ. ದೆಹಲಿ ಹೈಕೋರ್ಟ್(Delhi Highcourt) ಈಗಾಗಲೇ ಕೇಜ್ರಿವಾಲ್ ಅವರ ರಿಟ್ ಅರ್ಜಿ ವಜಾಗೊಳಿಸಿದೆ ಎಂದು ಹೇಳಿದೆ.
ಕೇಜ್ರಿವಾಲ್ ಪ್ರಕರಣವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆರೋಪಿಗಳ ಹಾರ್ಡ್ ಡ್ರೈವ್‌ಗಳು ಮತ್ತು ಮೊಬೈಲ್ ಫೋನ್‌ಗಳಿಂದ ಪಡೆದ ಡೇಟಾವು ಕೇಜ್ರಿವಾಲ್ ಅವರ ಒಳಗೊಳ್ಳುವಿಕೆಯನ್ನು ದೃಢಪಡಿಸುತ್ತದೆ ಎಂದು ಅಫಿಡವಿಟ್ ಉಲ್ಲೇಖಿಸಿದೆ. ಈ ದಾಖಲೆಗಳು ಕೇಜ್ರಿವಾಲ್ ಮತ್ತು ಅಕ್ರಮ ಚಟುವಟಿಕೆಗಳ ನಡುವಿನ ನೇರ ಸಂಪರ್ಕವನ್ನು ಸೂಚಿಸುತ್ತವೆ ಎಂದು ಸಿಬಿಐ ಆರೋಪಿಸಿದೆ.