ಪ್ರವಾಸಿ ಮತ್ತು ಕೇರಳ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – 3 ಸಾವು 38 ಮಂದಿ ಗಂಭೀರ ಗಾಯ…
ಪ್ರವಾಸ ಬಂದಿದ್ದ ಬಸ್ ಗೆ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 38 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕೆಂಚೇರಿಯಲ್ಲಿ ನಡೆದಿದೆ.
ಪ್ರವಾಸಿ ಬಸ್ ಎರ್ನಾಕುಲಂ ಜಿಲ್ಲೆಯ ಬಸೆಲಿಯೋಸ್ ವಿದ್ಯಾನಿಕೇತನ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊತ್ತು ಊಟಿಗೆ ಹೋಗುತ್ತಿತ್ತು. KSRTC ಬಸ್ ಕೊಯಮತ್ತೂರು ಕಡೆಗೆ ಹೋಗುತ್ತಿತ್ತು. ವರದಿಗಳ ಪ್ರಕಾರ, ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಮೂವರು ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಟೂರಿಸ್ಟ್ ಬಸ್ ಅತಿವೇಗದಿಂದ ಬಂದು ಕೆಎಸ್‌ಆರ್‌ಟಿಸಿ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದಾಗ ಅಪಘಾತಕ್ಕೀಡಾಗಿದೆ.
ರಾಷ್ಟ್ರೀಯ ಹೆದ್ದಾರಿ 544 ರಲ್ಲಿ ಬುಧವಾರ ರಾತ್ರಿ 11:30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಕ್ರೇನ್ ಮೂಲಕ ಬಸ್ ಎತ್ತಿಟ್ಟು ನಂತರ ಬಸ್ ನಿಂದ ಜನರನ್ನ ರಕ್ಷಿಸಿ ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಪಾಲಕ್ಕಾಡ್ ಜಿಲ್ಲಾಸ್ಪತ್ರೆ, ಅಲತ್ತೂರ್ ತಾಲೂಕು ಆಸ್ಪತ್ರೆ ಮತ್ತು ತ್ರಿಶೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗದೆ.
ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು: ಮುಹಮ್ಮದ್ ಹಾಶಿಮ್ (ಪಂದಳಂ), ಮನೋಜ್ (ಕಲ್ಲೇಪುಲ್ಲಿ), ಪ್ರವೀಣ್ ವರ್ಗೀಸ್ (ತಿರುಪ್ಪುರ್), ವಿಷ್ಣು (ಮುವಟುಪುಳ) ಮತ್ತು ಅಬ್ದುಲ್ ರವೂಫ್ (ಪೊನ್ನಾನಿ).ತ್ರಿಶೂರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು: ಹರಿಕೃಷ್ಣನ್ (22), ಅಮೇಯ ( 17), ಅನನ್ಯಾ (17), ಶ್ರದ್ಧಾ (15), ಅನೀಜಾ (15), ಅಮೃತಾ (15), ತನುಶ್ರೀ (15), ಹಿನ್ ಜೋಸೆಫ್ (15), ಜನೀಮಾ (15), ಅರುಣ್ ಕುಮಾರ್ (38), ಬ್ಲೆಸನ್ (18), ಮತ್ತು ಎಲ್ಸಾ (18).
ಮೃತರನ್ನು ಶಾಲಾ ಶಿಕ್ಷಕ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್ ವಿಂಟರ್‌ಬೋರ್ನ್ ಥಾಮಸ್, ಎಲ್ನಾ ಜೋಸ್ (ವಿದ್ಯಾರ್ಥಿಗಳು), ಕೊಲ್ಲಂನ ವಲಿಯೋಡೆ ನಿವಾಸಿ ಓಮನಕುಟ್ಟನ್ ಅವರ ಪುತ್ರ ಅನೂಪ್ (22), ರೋಹಿತ್ ರಾಜ್ ಎಂದು ಗುರುತಿಸಲಾಗಿದೆ. (24), ಮತ್ತು ದೀಪು (KSRTC ಪ್ರಯಾಣಿಕರು) ಎಂದು ಗುರುತಿಸಲಾಗಿದೆ.
Kerala Accident: 9 killed, including 5 students, as tourist bus rams into KSRTC bus in Palakkad