Kerala | ಕುಸಿದು ಬಿದ್ದ ಗ್ಯಾಲರಿ : 200ಕ್ಕೂ ಹೆಚ್ಚು ಗಾಯ!
ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ಘಟನೆ
ಗ್ಯಾಲರಿ ಕುಸಿದುಬಿದ್ದು ಸುಮಾರು 200 ಮಂದಿಗೆ ಗಾಯ
ಪಂದ್ಯಾವಳಿಯ ಆಯೋಜಕರ ವಿರುದ್ಧ ಪ್ರಕರಣ ದಾಖಲು
ಕಾಳಿಕಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೇರಳ : ಫುಟ್ ಬಾಲ್ ಗ್ಯಾಲರಿ ಕುಸಿದು ಬಿದ್ದು ಸುಮಾರು 200 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಸಮೀಪ ಪೂನ್ ಗಾಡ್ ನಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯುತ್ ಕಂಬ ಬಿದ್ದು, ಐವರ ಸ್ಥಿತಿ ಗಂಭೀರವಾಗಿದೆ.
ಪೂನ್ ಗಾಡ್ ನಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಗ್ಯಾಲರಿ ನಿರ್ಮಾಣ ಮಾಡಲಾಗಿತ್ತು.
ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಗ್ಯಾಲರಿ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ 200 ಮಂದಿ ಗಾಯಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟಕರ ವಿರುದ್ಧ ಕಾಳಿಕಾವು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಪಂದ್ಯಾವಳಿಯನ್ನು ಆ ಪ್ರದೇಶದ ಯುವಕರ ಗುಂಪು ಆಯೋಜಿಸಿತ್ತು, ಸಂಘಟಕರು ಇಷ್ಟೊಂದು ದೊಡ್ಡ ಗುಂಪನ್ನು ನಿರೀಕ್ಷಿಸಿರಲಿಲ್ಲ.
ಜನರ ನಿಯಂತ್ರಿಸಲು ಮೈದಾನದಲ್ಲಿ ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
kerala-FOOTBALL GALLERY COLLAPSED IN MALAPPURAM









