17 ವರ್ಷದ ಯುವತಿ ಮೇಲೆ 38 ಜನರಿಂದ ನಿರಂತರ ಅತ್ಯಚಾರ : ಕಣ್ಣಲ್ಲಿ ನೀರು ತರಿಸುತ್ತೆ ಈ ಯುವತಿಯ ಕಥೆ..!
ಕೇರಳ: 17 ವರ್ಷದ ಯುವತಿ ಮೇಲೆ 38 ರಾಕ್ಷಸರು ನಿರಂತರವಾಗಿ ಸಾಮೂಹಿಕ ಅತ್ಯಚಾರವೆಸಗಿರುವ ಹೇಯ ಕೃತ್ಯ ಕೇರಳದಲ್ಲಿ ಬೆಳಕಿಗೆ ಬಂದಿದೆ. ತನ್ನ ಬದುಕಿನಲ್ಲಿ ಚಿಕ್ಕ ವಯಸ್ಸಿನಿಂದಲೂ ಅನುಭವಿಸಿದ ನರಕಯಾತನೆಯ ಕರಾಳತೆಯನ್ನ ನಿರ್ಭಯಾ ಕೇಂದ್ರದ ಅಧಿಕಾರಿಗಳ ಎದುರು ಯುವತಿ ಬಿಚ್ಚಿಟ್ಟಿದ್ದಾಳೆ.
2016ರಲ್ಲಿ ಅಂದ್ರೆ ಬಾಲಕಿ 13 ವರ್ಷದವಳಾಗಿದ್ದಾಗಲೇ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿತ್ತಂತೆ. ಅದಾದ ಒಂದು ವರ್ಷದ ಬಳಿಕ ಮತ್ತೆ ಆಕೆಯ ಮೇಲೆ ಅತ್ಯಚಾರ ನಡೆದಿತ್ತು. ಹೀಗೆ ಆಕೆಯ ಮೇಲೆ 38 ಜನರಿಂದ ನಿರಂತರ ಅತ್ಯಾಚಾರ ನಡೆಎದಿದ್ದು, ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ.
ದೇವರ ಹುಂಡಿಯಲ್ಲಿ ಕಾಂಡೋಮ್: ಉಲ್ಲಾಳದಲ್ಲಿ ಕಿಡಿಗೇಡಿಗಳ ವಿಕೃತಿ..!
ಒಂದು ವರ್ಷದ ಹಿಂದೆ ಈಕೆ ಬಾಲಗೃಹದಿಂದ ಹೊರಬಂದ ಬಳಿಕ ಕೆಲ ಕಾಲ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಇದಾದ ಬಳಿಕ ಆಕೆ ಡಿಸೆಂಬರ್ ನಲ್ಲಿ ಪಾಲಕ್ಕಾಡ್ ನಲ್ಲಿ ಪತ್ತೆಯಾಗಿದ್ದಾಳೆ. ಅಲ್ಲಿಂದ ಆಕೆಯನ್ನ ನಿರ್ಭಯಾ ಕೇಂದ್ರಕ್ಕೆ ಕರೆದೊಯ್ದು ಕೌನ್ಸಿಲಿಂಗ್ ಕೊಡಿಸಿದ ವೇಳೆ ಆಘಾತಕಾರಿ ವಿಚಾರವನ್ನ ಹೊರಗೆಡವಿದ್ದಾಳೆ. ಬಾಲ್ಯದಿಂದಲೂ ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಇನ್ನೂ ಚಿಕ್ಕ ವಯಸ್ಸಿನಿಂದಲೇ ಅನೇಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಅಪ್ರಾಪ್ತೆಯ ಮನಸ್ಥಿತಿ ತೀರ ಹದಗೆಟ್ಟಿದೆ. ಪ್ರಕರಣ ಸಂಬಂಧ 44 ಮಂದಿಯ ವಿರುದ್ಧ ಕೇಸ್ ಗಳನ್ನ ದಾಖಲಿಸಲಾಗಿದೆ. ಈಗಾಗಲೇ 20 ಮಂದಿಯನ್ನ ಬಂಧಿಸಲಾಗಿದ್ದು, ಉಳಿದವರ ಸೆರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel