“ತೊಡೆ ಸಂಧಿಯ ಲೈಂಗಿಕ ಕ್ರಿಯೆಯೂ ಅತ್ಯಾಚಾರಕ್ಕೆ ಸಮ” : ಕೇರಳ ಹೈಕೋರ್ಟ್”
ಕೇರಳ ಹೈಕೋರ್ಟ್ ಮಹಿಳಾ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.. ಹೌದು.. ಮಹಿಳೆಯ ತೊಡೆಗಳನ್ನು ಜೋಡಿಸಿ, ಅದರ ಸಂಧಿಯಲ್ಲಿ ನಡೆಸುವ ಅಸಹಜ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಸಮನಾದದ್ದು ಎಂದೇ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ನೆರೆ ಮನೆಯ ಬಾಲಕಿಯ ಮೇಲೆ ದುರುದ್ದೇಶಪೂರಿತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮೂಲಕ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಅರ್ಜಿದಾರ ನಡೆಸಿರುವ ಲೈಂಗಿಕ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (1), 375 (ಸಿ) ವ್ಯಾಪ್ತಿಗೆ ಬರುವ ಅಪರಾಧಗಳಾಗಿವೆ ಎಂದು ಪೀಠ ಹೇಳಿದೆ.
ಪೊಲೀಸರಿಗೆ ಸೇಫ್ಟಿ ಇಲ್ಲಾ…! ಸಾರ್ವಜನಿಕರ ಕಥೆ ಏನು..? ಮಹಿಳಾ ಕಾನ್ಸ್ ಟೇಬಲ್ ಮೇಲೆ ಅತ್ಯಾಚಾರವೆಸಗಿದ ಸಬ್ ಇನ್ಸ್ ಪೆಕ್ಟರ್
ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಜೀವ ಇರುವ ತನಕ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಹೈಕೋರ್ಟ್ ಮಾರ್ಪಡಿಸಿದೆ. ಅಲ್ಲದೆ ಸೆಷನ್ಸ್ ನ್ಯಾಯಾಲಯವು ಐಪಿಸಿ 354, 354ಎ (1) ಕೃತ್ಯಗಳಿಗೆ ಜಾರಿಗೊಳಿಸಿದ್ದ ಶಿಕ್ಷೆಗಳನ್ನು ಹೈಕೋರ್ಟ್ ದೃಢಪಡಿಸಿದೆ. ಈ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.