ತಾಯ್ತನ ಹಾಗೂ ವೃತ್ತಿಜೀವನವನ್ನು ಒಟ್ಟಾಗಿ ನಿಭಾಯಿಸುವ ಕಷ್ಟ ಏನೆಂಬುದು ಕೇವಲ ಮಹಿಳೆಗೆ ಗೊತ್ತು..! – ಕೇರಳ ಹೈಕೋರ್ಟ್
ಹೆರಿಗೆ ರಜೆ ಮೇಲೆ ತೆರಳಿದ್ದ ಕೊಲ್ಲಂನ ಮಹಿಳಾ ಕೌನ್ಸಿಲರ್ನ್ನು ಸೇವೆಯಿಂದ ವಜಾಗೊಳಿಸಿದ ಸರ್ಕಾರದ ಕ್ರಮವನ್ನು ಕೇರಳ ಹೈಕೋರ್ಟ್ ತೀವ್ರವಾಗಿ ಖಂಡಿಸಿದ್ದು, ತಾಯ್ತನ ಹಾಗೂ ವೃತ್ತಿಜೀವನವನ್ನು ಒಟ್ಟಾಗಿ ನಿಭಾಯಿಸುವ ಕಷ್ಟ ಏನೆಂಬುದು ಕೇವಲ ಮಹಿಳೆ ಮಾತ್ರ ಬಲ್ಲಳೆಂದು ಅಭಿಪ್ರಾಯಪಟ್ಟಿದೆ.. ಜೊತೆಗೆ ಕೇರಳ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ಆಗತಾನೇ ತಾಯ್ತನದ ಜೀವನವನ್ನು ನೋಡುತ್ತಿರುವವರಿಗೆ ವೃತ್ತಿ ಜೀವನವನ್ನು ನಿಭಾಯಿಸೋದು ತುಂಬಾನೇ ಕಷ್ಟ. ಮಾತೃತ್ವದ ಸೂಕ್ಷ್ಮತೆ ಅಂದರೆ ಹಾಗೆ. ಹೀಗಾಗಿಯೇ ಮಾತೃತ್ವ ರಜೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯ ಮಾಡಲಾಗಿದೆ ಎಂದು ಹೇಳಿದ್ರು.
ಜಮ್ಮು ಕಾಶ್ಮೀರ : ಎನ್‌ಕೌಂಟರ್ ನಲ್ಲಿ ಇಬ್ಬರು ಉಗ್ರರ ಮಟಾಶ್…!
ಕೊಲ್ಲಂನ ವಂದನಾ ಶ್ರೀಮೇಧ ಜೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ಮಾತೃತ್ವ ರಜೆಯನ್ನು ನೀಡಲು ನಿರಾಕರಿಸಿ ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ ವಂದನಾ ಕೋರ್ಟ್ ಮೆಟ್ಟಿಲೇರಿದ್ದರು. ವಂದನಾ ಅನಧಿಕೃತ ರಜೆಯಲ್ಲಿದ್ದಾರೆ ಎಂದು ಆರೋಪಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಜೀವನೋಪಾಯಕ್ಕೆ ಬೇರೆ ಮಾರ್ಗವಿಲ್ಲದ ಕಾರಣ ಸರ್ಕಾರದ ಆದೇಶವನ್ನು ವಂದನಾ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಂದನಾರ ಮನವಿಯನ್ನು ಎತ್ತಿ ಹಿಡಿದಿದೆ.