ಮಕ್ಕಳ ಅಶ್ಲೀಲ ವಿಡಿಯೋಗಳ ಚಿತ್ರೀಕರಣ: ಕೇರಳದಲ್ಲಿ 41 ಮಂದಿ ಅರೆಸ್ಟ್..!
ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನ ವೀಕ್ಷಣೆ ಮಾಡಿರುವ ವರದಿ ಹೊರಬಿದ್ದ ಬೆನ್ನಲ್ಲೇ ಇದನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಪರಿಣಾಮ ಇದೀಗ ಮಕ್ಕಳ ಅಶ್ಲೀಲ ಚಿತ್ರಗಳಿಗೆ ಉತ್ತೇಜನ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 41 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ತಣ್ಣಗಿರೋ ಚಪಾತಿ ಕೊಟ್ಟ ಕಾರಣಕ್ಕೆ ಡಾಬಾ ಮಾಲೀಕನಿಗೆ ಗುಂಡಿಟ್ಟ ಕಿಡಿಗೇಡಿಗಳು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 339 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಂಪ್ಯೂಟರ್ಗಳು, ಹಾರ್ಡ್ ಡಿಸ್ಕ್ಗಳು ಸೇರಿದಂತೆ 392 ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಪರೇಷನ್ ಪಿ-ಹಂಟ್ 20.3′ ಹೆಸರಿನಲ್ಲಿ ಈ ಕಾರ್ಯಾಚರಣೆ ಅಡಿಯಲ್ಲಿ, ಕೇರಳದಾದ್ಯಂತ 596 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ತಿರುವನಂತಪುರದಲ್ಲೇ 58 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋ0ಡ್ ಮಾಡುತ್ತಿದ್ದ ಬಂಧಿತರಲ್ಲಿ ವೃತ್ತಿಪರ ಉದ್ಯೋಗಲ್ಲಿದ್ದ ಯುವಕರು ಹಾಗೂ ಮಕ್ಕಳ ಸಾಗಣಿಕೆಯಲ್ಲಿ ತೊಡಗಿದ್ದವರು ಇರುವುದು ತಿಳಿದುಬಂದಿದೆ. ಇನ್ನೂ ಓರ್ವ ರೌಡಿಶೀಟರ್ ನನ್ನೂ ಸಹ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನೂ ಆರೋಪಿಗಳು 6ರಿಂದ 15 ವರ್ಷದ ಸ್ಥಳೀಯ ಮಕ್ಕಳನ್ನು ಬಳಸಿಕೊಂಡು ಚಿತ್ರಗಳು ಮತ್ತು ವಿಡಿಯೊಗಳನ್ನು ಮಾಡಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಹಂ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








