ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯ ಪೆಟ್ಟಿಮುಡಿಯಲ್ಲಿ ಅಗಸ್ಟ್ 7ರಂದು ಸಂಭವಿಸಿದ ಭೂ ಕುಸಿತದಲ್ಲಿ ಮೃತರ ಸಂಖ್ಯೆ 55ಕ್ಕೆ ಏರಿಕೆ ಕಂಡಿದೆ.
ಇಡುಕ್ಕಿ, ಅಗಸ್ಟ್ 13: ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 55 ಕ್ಕೆ ಏರಿದ್ದು, ಬುಧವಾರ ಅವಶೇಷಗಳಿಂದ ಇನ್ನೂ ಮೂರು ಶವಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾದ 15 ಜನರನ್ನು ಪತ್ತೆಹಚ್ಚಲು ಎನ್’ಡಿಆರ್’ಎಫ್ ನೇತೃತ್ವದ ಕಾರ್ಯಾಚರಣೆ ಇಂದು ಆರನೇ ದಿನವೂ ಈ ಪ್ರದೇಶದಲ್ಲಿ ಮುಂದುವರೆದಿದೆ.
ಇಲ್ಲಿಯವರೆಗೆ, ನಾವು 55 ಶವಗಳನ್ನು ಪತ್ತೆ ಮಾಡಿದ್ದೇವೆ. ಮೊದಲು ನಾವು 12 ಜನರನ್ನು ರಕ್ಷಿಸಿದ್ದೇವೆ. ಇನ್ನೂ 15 ಜನರು ಕಾಣೆಯಾಗಿದ್ದಾರೆ. ಆರನೇ ದಿನವೂ ಶೋಧ ನಡೆಯುತ್ತಿದೆ. ಇಂದು ಶೋಧ ಕಾರ್ಯಗಳಿಗೆ ಅನುಕೂಲಕರವಾಗಿದೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಎಚ್ ದಿನೇಶನ್ ತಿಳಿಸಿದ್ದರು.
ಆಗಸ್ಟ್ 7 ರಂದು ಸಂಭವಿಸಿದ ಭೂಕುಸಿತದಲ್ಲಿ 82 ಜನರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಜಿಲ್ಲಾಧಿಕಾರಿ ಹೇಳಿದರು. ಇಲ್ಲಿನ ರಾಜಮಲಾ ಬಳಿಯ ಭೂಕುಸಿತದಿಂದ ಎಸ್ಟೇಟ್ ಕಾರ್ಮಿಕರ ವಸಾಹತುಗಳು ನಾಶವಾಗಿದ್ದವು ಮತ್ತು ಅಂದಿನಿಂದ ವಿವಿಧ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.