Kerala-ಕೆಲಸಕ್ಕೆ ಹೊದ ಪತ್ನಿಯ ಮೇಲೆ ಹಲ್ಲೆ : ಪತಿ ಪೊಲೀಸ್ ವಶಕ್ಕೆ
Kerala-ತಿರುವನಂತಪುರಂ: ತನ್ನ ಮಾತು ಧಿಕ್ಕರಿಸಿ ಕೆಲಸಕ್ಕೆ ಹೊದ ಪತ್ನಿಯನ್ನ ಪತಿ ಮಹಾಶಯ ಥಳಿಸಿದ ಘಟನೆ ಬೇಳಕಿಗೆ ಬಂದಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ.
ದಿಲೀಪ್ ಪತ್ನಿಯನ್ನುಥಳಿಸಿದ ಪತಿಯಾಗಿದ್ದು ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ, ಸದ್ಯ ಗಾಯಗೊಂದಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಪತ್ನಿಯನ್ನ ಥಳಿಸುತ್ತಿರುವ ಘಟನೆಯ ವಿಡಿಯೊ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂಬಂಧ ಮಲಯಂಕಿಝು ಪೊಳಿಸ ಠಾಣೆಐಲ್ಲಿ ಪ್ರಕರಣ ದಾಖಲಾಗಿದೆ . ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ
ವೀಡಿಯೋದಲ್ಲಿ ದಿಲೀಪ್ ತನ್ನ ಪತ್ನಿಯನ್ನು ಅಮಾನುಷವಾಗಿ ಹೊಡೆದಿರುವುದನ್ನು ಒಪ್ಪಿಕೊಂಡಿದ್ದಾನೆ. ಸಾಲ ತೀರಿಸಲು ಕೆಲಸಕ್ಕೆ ಹೋಗುತ್ತಿದ್ದೆ ಎಂದು ಆತನ ಪತ್ನಿ ಹೇಳಿದ್ದಾಳೆ. ಪತಿ ಹಿಂಸೆ ತಡೆಯಲಾಗದೇ ಕೊನೆಗೆ ಕೆಲಸ ಬಿಡಲು ಒಪ್ಪಿಕೊಂಡಿದ್ದಾಳೆ ಎಂದು ವರದಿ ಮಾಡಲಾಗಿದೆ.
ದೈಹಿಕ ಹಲ್ಲೆ ಮಾಡಿದ ಪಾಪಿ ಪತಿಗೆ ಕಾನೂನಾತ್ಮಕವಾಗಿ ಈ ರೀತಿಯಾದ ಶಿಕ್ಷೆ ದೊರೆತಿವೆ.
ಆತನ ವಿರುದ್ಧ ಸೆಕ್ಷನ್ 307 (ಕೊಲೆಯ ಯತ್ನ),
498 (ಎ) (ಹೆಣ್ಣಿನ ಪತಿ ಅಥವಾ ಪತಿ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು),
323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಶಿಕ್ಷೆ),
324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಮತ್ತು
ಭಾರತೀಯ ದಂಡ ಸಂಹಿತೆಯ 294 (B) (ಯಾವುದೇ ಅಶ್ಲೀಲ ಹಾಡು, ಬಲ್ಲಾಡ್ ಅಥವಾ ಪದಗಳನ್ನು ಹಾಡುವುದು, ಪಠಿಸುವುದು ಅಥವಾ ಉಚ್ಚರಿಸುವುದು, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಹತ್ತಿರ) ಕಾನೂನಿನ ಅಡಿಯಲ್ಲಿ ಬಂಧಿಸಿಲಾಗಿದೆ








