Udupi | ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು..?!
ಉಡುಪಿ : ಕರಾವಳಿ ಗಡಿಭಾಗದಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನಕಾರರು, ಒತ್ತಾಯ ಪೂರ್ವಕವಾಗಿ ಕೇಸರಿ ಶಾಲು ಹಾಕಿಸಿದ್ದಾರೆ.
ಹಿಜಾಬ್ ವಿವಾದ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಈ ರೀತಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಶಾಲೆಗೆ ಹೋಗು ಎನ್ನುವುದು ಎಷ್ಟು ಸರಿ..?
ಉದ್ದೇಶ ಪೂರ್ವಕವಾಗಿಯೇ ವಿವಾದ ಭುಗಿಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಇನ್ನು ಈ ವಿಚಾರವಾದಲ್ಲಿ ಕಾಲೇಜು ಆಡಳಿತ ಮಂಡಳಿಯ ತೀರ್ಮಾನಕ್ಕೆ ಮುಂದಾಗಿದ್ದು, ಶಾಂತ ರೀತಿಯಲ್ಲಿ ಎಂದಿನಂತೆ ಪಠ್ಯ ಕ್ರಮವನ್ನು ಮುಂದುವರೆಸಲು ಆದೇಶಿಸಿದ್ದಾರೆ.
ಇನ್ನು ಹಿಜಾಬ್ ವಿವಾದದ ಬಗ್ಗೆ ಕುಂದಾಪುರದ ವಿದ್ಯಾರ್ಥಿನಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಹಿಜಬ್ ನಮ್ಮ ಜೀವನದ ಭಾಗ. ನಮ್ಮ ಹಿರಿಯರು ಹಿಜಬ್ ಧರಿಸುತ್ತಿದ್ದರು. ನನ್ನ ರೀತಿಯಲ್ಲಿಯೇ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು.
ಈಗ ಏಕಾಏಕಿ ಈ ರೂಲ್ಸ್ ತಂದಿದ್ದು ಯಾಕೆ..? ನಾವು ಹಿಜಬ್ ಹಾಕಿದ್ರೆ ಯಾರಿಗೆ ಏನು ತೊಂದರೆ ಇದೆ. ನಮ್ಮ ಪ್ರಶ್ನೆಗೆ ಉತ್ತರವೇ ಇಲ್ಲ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಯಾಕೆ ಎಂದು ಪ್ರಶ್ನಿಸಿದ್ದಾರೆ.