ಚೀನಾದ ಟಿಕ್ ಟಾಕ್ ಆಪ್ ನಿಷೇಧಿಸುವುದಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದೇ ತಡ ಟಿಕ್ ಟಾಕ್ ಮುಖ್ಯಸ್ಥ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹಂಗಾಮಿ ಸಿಇಒ ಆಗಿ ಟಿಕ್‌ಟಾಕ್ ಜನರಲ್ ಮ್ಯಾನೇಜರ್ ವನೆಸ್ಸಾ ಪಪ್ಪಾಸ್ ಅವರು ನೇಮಕಗೊಂಡಿದ್ದಾರೆ.
![]()
ಅಮೆರಿಕದಲ್ಲಿ ಟಿಕ್‌ಟಾಕ್ ನಿಷೇಧ ಕುರಿತಾದ ಮಾತುಕತೆ ಮತ್ತು ಹಣಕಾಸು ವ್ಯವಹಾರದ ಮೇಲಿನ ನಿರ್ಬಂಧವೇ ಈ ಬೆಳವಣಿಗೆ ಕಾರಣ ಎನ್ನಲಾಗಿದೆ. ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ವಿಚಾರವಾಗಿ 45 ದಿನಗಳಲ್ಲಿ ಟಿಕ್‌ಟಾಕ್ ಮಾರುವಂತೆ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್‌ಗೆ 90 ದಿನಗಳವರೆಗೆ ಮಾರಬೇಕು. ಇಲ್ಲವಾದರೆ ಬ್ಯಾನ್ ಮಾಡಬೇಕು ಎಂದು ಆದೇಶಿಸಿದ್ದರು.









