KGF 2, Day 4 Collections : ಆ ದಾಖಲೆ ಮಾಡಿದ ವಿಶ್ವದ ಎರಡನೇ ಸಿನಿಮಾ
ಸೌತ್ ಟು ನಾರ್ಥ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹವಾ ಜೋರಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಸಿನಿಮಾದ ಅಬ್ಬರ ಮುಂದುವರೆದೆ.
ನಟ ಯಶ್ ಅಭಿನಯದ ಬ್ಲಾಕ್ಬಸ್ಟರ್ ಕೆಜಿಎಫ್ ಅಧ್ಯಾಯ 1 ರ ಸೀಕ್ವೆಲ್ ಆಗಿ ತೆರೆ ಮೇಲೆ ಬಂದ ಕೆಜಿಎಫ್ ಚಾಪ್ಟರ್ 2 ಗೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಏಪ್ರಿಲ್ 14 ರಂದು ಬಿಡುಗಡೆಯಾಗಿರುವ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ.
Debuts at #2 globally for the opening weekend.
First movie from Sandalwood to get into Global Top 10 opening weekend.
Only Indian movie to get into Global top 10 for the weekend April 15-17.#KGF2
— Manobala Vijayabalan (@ManobalaV) April 18, 2022
ಕಾಮ್ಸ್ಕೋರ್ ವರದಿಯ ಪ್ರಕಾರ ಕೆಜಿಎಫ್ನ ಚಾಪ್ಟರ್ 2 ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದ ದಾಖಲೆ ಬರೆದಿದೆ.
ಏಪ್ರಿಲ್ 15 ರಿಂದ 17 ರ ನಡುವೆ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ.
ಮೂರೇ ದಿನದಲ್ಲಿ ಮುನ್ನೂರು ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾ ಇದೀಗ 500 ಕೋಟಿ ಕ್ಲಬ್ ಸೇರಿದೆ.

ಇದುವರೆಗೆ ಚಿತ್ರ 552 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ.
ಮುಂದಿನ ದಿನಗಳಲ್ಲಿ ಈ ಸಿನಿಮಾ ಇನ್ನೆಷ್ಟು ದಾಖಲೆಗಳನ್ನು ಮುರಿಯುತ್ತದೋ ಕಾದು ನೋಡಬೇಕು! kgf-2-day-4-collections kgf-2-movie-crosses-500-crore-club








