‘ರಾಖಿಭಾಯ್’ ಗೆ ಹೆದರಿದ್ರಾ ಬಾಲಿವುಡ್ ‘ಕ್ವೀನ್’ : ‘ಧಾಕಡ್’ ರಿಲೀಸ್ ಮುಂದೂಡಿಕೆ
ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿರುವ ಮೋಸ್ಟ್ ಎಕ್ಸ್ ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದ ಕೆಜಿಎಫ್ ಚಾಪ್ಟರ್ 2.. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಈ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ.. ಆದ್ರೆ ಈ ಸಿನಿಮಾಗೆ ಹೆದರಿ ಅನೇಕ ಸಿನಿಮಾಗಳು ರಿಲೀಸ್ ಡೇಟ್ ಮುಂದೂಡಿವೆ.. ಆದ್ರೆ ಅದೇನೋ ಧೈರ್ಯ ಮಾಡಿ ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಮಾಡ್ತಿದ್ದಾರೆ..
ಈ ನಡುವೆಯೇ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಧಾಕಡ್ ತನ್ನ ರಿಲೀಸ್ ಡೇಟ್ ಮುಂದೂಡಿದೆ.. ಈ ಚಿತ್ರವನ್ನು ಮೊದಲು ಇದೇ ವರ್ಷ ಅಕ್ಟೋಬರ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.. ಆದರೆ ಸಾಂಕ್ರಾಮಿಕ ರೋಗ ಮತ್ತು ಥಿಯೇಟರ್ ಗಳು ಬಂದ್ , ಲಾಕ್ ಡೌನ್ ಕಾರಣದಿಂದಾಗಿ ವಿಳಂಬವಾಯಿತು. ಈಗ ಭಾರತದಲ್ಲಿ ಥಿಯೇಟರ್‌ಗಳು ಮತ್ತೆ ತೆರೆದಿವೆ.. ಹಲವಾರು ಸ್ಟಾರ್ ಸಿನಿಮಾಗಳು ಕೂಡ ಈಗಾಗಲೇ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದ್ದು, ಇನ್ನೂ ಅನೇಕ ಸಿನಿಮಾಗಳು ರಿಲೀಸ್ಗೆ ಅಣಿಯಾಗುತ್ತಿವೆ. ಈ ಪೈಕಿ ಬಾಲಿವುಡ್ ನ ಕ್ವೀನ್ ಕಂಗನಾ ನಟನೆಯ ಧಾಕಡ್ ಕೂಡ ಒಂದು. 
ಇತ್ತೀಚಿನ ವರದಿಯ ಪ್ರಕಾರ, ಚಿತ್ರದ ನಿರ್ಮಾಪಕರು ಏಪ್ರಿಲ್ 8, 2022 ಕ್ಕೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದರು.. ಆದ್ರೀಗ ಮೇ 2022 ಕ್ಕೆ ಮುಂದೂಡಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ KGF 2 ಹವಾ.. ಹೌದು KGF 2 ಸಿನಿಮಾ ಏಪ್ರಿಲ್ 14 ಕ್ಕೆ ತೆರೆಕಾಣುವುದರಿಂದ ಅಲ್ಲದೇ ಈ ಸಿನಿಮಾಗೆ ಎಷ್ಟು ಕ್ರೇಜ್ ಇದೆ ಎಂಬುದು ಗೊತ್ತಿರುವುದರಿಂದಲೇ ಸಿನಿಮಾತಂಡ ಮುಂದಾಲೋಚನೆಯಿಂದ ‘KGF’ ಜೊತೆ ಕಾದಾಟ ಅಸಂಭವ ಎಂದೇ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡ್ತಿದೆ ಎನ್ನಲಾಗಿದೆ.. ಪಿಂಕ್ವಿಲ್ಲಾ ವರದಿ ಮಾಡಿದಂತೆ, ಬಾಕ್ಸ್ ಆಫೀಸ್ ಸ್ಪರ್ಧೆಯಿಂದ ದೂರ ಸರಿಯಲು ಧಾಕಡಡ್ ತಂಡ ಮುಂದಾಗಿದೆ ಎನ್ನಲಾಗಿದೆ.. ಇನ್ನೂ ಮೂಲಗಳ ಪ್ರಕಾರ, ಚಿತ್ರವು ಈಗ ಮೇ 20, 2022 ರಂದು ಬಿಡುಗಡೆಯಾಗಲಿದೆ.
ಇನ್ನೂ ಢಾಕಡ್ ಬಗ್ಗೆ ಮಾತನಾಡುವುದಾದ್ರೆ ಚಿತ್ರದಲ್ಲಿ ಕಂಗನಾ ರನೌತ್ ಸಿಕ್ಕಾಪಟ್ಟೆ ಟೆರರ್ ಆಗಿ ಕಾಣಿಸಿಕೊಳ್ತಿದ್ದಾರೆ. ರಜನೀಶ್ ಘಾಯ್ ನಿರ್ದೇಶನದ ಈ ಸಿನಿಮಾ ಭಾರತದ ಮೊದಲ ಮಹಿಳಾ ಪ್ರಧಾನ ಆಕ್ಷನ್ ಥ್ರಿಲ್ಲರ್ ಸಿನಿಮಾವೆಂದೇ ಘೋಷಿಸಲಾಯಿತು. ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಸಹ ನಟಿಸುತ್ತಿದ್ದು , ಕಂಗನಾ ತೀವ್ರ ತರಬೇತಿ ಪಡೆದಿದ್ದಾರೆ. ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ







