‘KGF 2’ ರಿಲೀಸ್ ಗೆ ಇಡೀ ಭಾರತೀಯ ಸಿನಿಮಾರಂಗವೇ ಕಾದುಕುಳಿತಿದೆ.. ಅಭಿಮಾನಿಗಳ ಕಾತರತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಏಪ್ರಿಲ್ 14 ಕ್ಕಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ..
ಈ ನಡುವೆ ಪ್ರಶಾಂತ್ ನೀಲ್ ಯಶ್ ಕಾಂಬಿನೇಷನ್ ನ ಸಿನಿಮಾದ ಟ್ರೈಲರ್ ರಿಲೀಸ್ ದಿನಾಂಕವನ್ನ ಅನೌನ್ಸ್ ಮಾಡಿಬಿಟ್ಟಿರುವ ಸಿನಿಮಾತಂಡ ಅಭಿಮಾನಿಗಳ ಕಾತರತೆಯನ್ನ ಇಮ್ಮಡಿಗೊಳಿಸಿದೆ.
ಅಂದದ್ಹಾಗೆ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದಾಗ ,,, ಜನರು ಕೆಜಿಎಫ್ ಲೊಕೇಶನ್ ಸೆಟ್ ನೋಡಿ ಹೌಹಾರಿದ್ದರು.. ಆ ಲೊಕೇಶನ್ ಬಗ್ಗೆ ಎಲ್ಲರಲ್ಲೂ ಕ್ಯೂರಿಯಾಸಿಟಿ ಹುಟ್ಟುಕೊಂಡಿತ್ತು..
ಈಗ ಆ ಲೊಕೇಶನ್ ಹೋಗೋದಕ್ಕೆ ಗೂಗಲ್ ಮ್ಯಾಪ್ ಸಹಾಯ ಮಾಡಲಿದೆ.. ಅಂದ್ರೆ ಕೆಎಜಿಎಫ್ ಸಿನಿಮಾದ ಸೆಟ್ ತೆಗೆದ ಮೇಲೂ ಆ ಜಾಗ ಕೆಜಿಎಫ್ ಎಂದೇ ಪ್ರಸಿದ್ಧಿ ಪಡೆದಿದದ್ದು , ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಸೆಟ್‍ನ ವಿಳಾಸ ಸೃಷ್ಟಿಯಾಗಿಬಿಟ್ಟಿದೆ.
ಕೆಜಿಎಫ್ ಸಿನಿಮಾ ಶೂಟಿಂಗ್ ಮಾಡಿದ ಸ್ಥಳವನ್ನ ಗೂಗಲ್ ನಲ್ಲಿ ಕೆಜಿಎಫ್ ಫಿಲ್ಮ್ ಸೆಟ್ ಎಂದೇ ಮರುನಾಮಕರಣ ಮಾಡಲಾಗಿದೆ. ಇದು ಅಭಿಮಾನಿಗಳ ಖುಷಿಪಗೆ ಕಾರಣವಾಗಿದೆ. ಈ ಮೂಲಕ ಕೆಜಿಎಫ್ ಮತ್ತೊಂದು ಹೊಸ ಆಶ್ಚರ್ಯಕರ ದಾಖಲೆ ಮಾಡಿದೆ.
ಕೆಜಿಎಫ್ ಸೆಟ್ ಎಂದು ಟೈಪ್ ಮಾಡಿದರೆ ಕೆಜಿಎಫ್ ಫಿಲ್ಮ್ ಸೆಟ್ ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ ಕೆಜಿಎಫ್ ಸೇರಿದಂತೆ, ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಅಲ್ಲದೆ ಸಿನಿಮಾ ಸೆಟ್ ಹಲವು ವರ್ಷಗಳ ಕಾಲ ಅಲ್ಲೇ ಉಳಿಸಿಕೊಂಡಿತು. ಈಗ ಆ ಜಾಗ ಕೆಜಿಎಫ್ ಫಿಲ್ಮ್ ಸೆಟ್ ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ.
ಹರ್ಷಾಲಿ ಮಲ್ಹೋತ್ರಾ – ಎಲ್ಲಿ ಹೋದಳು ಬಜರಂಗಿ ಬಾಯಿಜಾನ್ ಮುನ್ನಿ ????
125 ಮಕ್ಕಳ ಹಾರ್ಟ್ ಸರ್ಜರಿಗೆ ಮುಂದಾದ ಹೃದಯವಂತ ಮಹೇಶ್ ಬಾಬು…