KGF 2 : ಸ್ಟಾರ್ ಹೀರೋಗಳ ರೆಮ್ಯೂನರೇಷನ್ ಬಗ್ಗೆ RGV ಶಾಕಿಂಗ್ ಟ್ವಿಟ್
ರಾಮ್ ಗೋಪಾಲ್ ವರ್ಮಾ.. ಈ ಹೆಸರು ಚಿತ್ರರಂಗದಲ್ಲಿ ಒಂದು ಸಂಚಲನ. ಯಾವಾಗ, ಯಾರ ಮೇಲೆ, ಯಾವ ರೀತಿಯ ಕಾಮೆಂಟ್ ಮಾಡುತ್ತಾರೋ ಗೊತ್ತಿಲ್ಲ. ಟ್ರೆಂಡಿಂಗ್ ವಿಷಯಗಳ ಬಗ್ಗೆ ಮಾತನಾಡಬೇಕು, ಅದರಿಂದ ವಿವಾದ ಸೃಷ್ಠಿಸಬೇಕು. ಒಂದು ವಿಷಯವನ್ನು ಇನ್ನೊಂದಕ್ಕೆ ಲಿಂಕ್ ಮಾಡುವುದು .. ಕಾಮೆಂಟ್ಗಳನ್ನು ಮಾಡುವುದು. ಇದು ರಾಮ್ ಗೋಪಾಲ್ ವರ್ಮಾ ಸ್ಪೆಷಾಲಿಟಿ.
ಇದೀಗ ಸ್ಟಾರ್ ಹೀರೋಗಳ ಸಂಭಾವಣೆ ಬಗ್ಗೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಚರ್ಚೆ ಶುರು ಮಾಡಿದ್ದಾರೆ.
ಕೆಜೆಎಫ್-2 ಪಾಸಿಟಿವ್ ಟಾಕ್ನೊಂದಿಗೆ ಮೂಡಿಬರುತ್ತಿರುವ ಹಿನ್ನಲೆಯಲ್ಲಿ ಆರ್ಜಿವಿ ಸರಣಿ ಟ್ವೀಟ್ಗಳ ಮೂಲಕ ಚಿತ್ರತಂಡವನ್ನು ಅದರಲ್ಲೂ ವಿಶೇಷವಾಗಿ ಪ್ರಶಾಂತ್ ನೀಲ್ ಅವರನ್ನು ಹೊಗಳುತ್ತಿದ್ದಾರೆ. ಇಲ್ಲಿಯವರೆಗೂ ಚೆನ್ನಾಗಿದೆ. ಆದ್ರೆ ಕೆಜೆಎಫ್ ಸಕ್ಸಸ್ ಅನ್ನು ಸ್ಟಾರ್ ಹೀರೋಗಳ ಸಂಭಾವನೆ ಜೊತೆಗೆ ಗಂಟಾಕುತ್ತಾ, ಟ್ವೀಟ್ ಮಾಡಿ ಚರ್ಚೆಗೆ ನಾಂದಿಯಾಡಿದ್ದಾರೆ.
ಸಿನಿಮಾ ನಿರ್ಮಾಣಕ್ಕೆ ಎಷ್ಟು ಹಣ ಹಾಕಿದ್ರೆ ಅಷ್ಟು ಹಣ ವಾಪಸ್ ಬರುತ್ತೆ ಎಂಬುದಕ್ಕೆ ಕೆಜಿಎಫ್-2 ಸಿನಿಮಾ ಉದಾಹರಣೆ. ತಯಾರಿಕೆಯ ಗುಣಮಟ್ಟ ಹೆಚ್ಚಾದಷ್ಟೂ ಯಶಸ್ಸು ಹೆಚ್ಚುತ್ತದೆ. ಸ್ಟಾರ್ ಹೀರೋಗಳಿಗೆ ಭಾರೀ ಸಂಭಾವನೆ ನೀಡುವುದು ವ್ಯರ್ಥ ಎಂದು ಆರ್ಜಿವಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸ್ಟಾರ್ ಹೀರೋಗಳ ಸಂಭಾವನೆ ಭಾರೀ ಪ್ರಮಾಣದಲ್ಲಿದೆ. ಕಾಲಿವುಡ್ನಲ್ಲೂ ಇದೇ ಪರಿಸ್ಥಿತಿ. ಆದರೆ, ಇವುಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಸಂಭಾವನೆ ತೀರಾ ಕಡಿಮೆ. ಕೆಜೆಎಫ್ನಂತಹ ಚಿತ್ರಗಳನ್ನು ಹೊರತುಪಡಿಸಿದರೆ.. ಬಹುತೇಕ ಚಿತ್ರಗಳು ಕಡಿಮೆ ಬಜೆಟ್ನಲ್ಲಿವೆ. ವರ್ಮಾ ಟ್ವೀಟ್ ಇದೀಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. kgf-2-rgv-shocking-comments-star-heroes-remuneration









