‘KGF 2’ ಜೊತೆಗೆ ಕೈ ಜೋಡಿಸಿದ ‘ಖುಷಿ ಅಡ್ವಟರ್ಸಿಂಗ್ ಐಡಿಯಾಸ್’..!
ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿರುವ ಮೋಸ್ಟ್ ಎಕ್ಸ್ ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡದ ಕೆಜಿಎಫ್ ಚಾಪ್ಟರ್ 2.. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಈ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ.. ಅಂದ್ಹಾಗೆ ಸಿನಿಮಾಗೆ ಖುಷಿ ಅಡ್ವಟರ್ಸಿಂಗ್ ಐಡಿಯಾಸ್ ಅವರು ವಿಶೇಷ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ವರದಿಯಾಗಿದೆ.. ಹೌದು.. ಹೊಂಬಾಳೆ ಫಿಲಂಸ್ ಬ್ಯಾನರ್ ನ ಅಡಿ ನಿರ್ಮಾಣವಾಗ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡ್ತಿರುವ ಈ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾದಾಗ KGF ಫ್ಯಾನ್ಸ್ ಬಾರೀ ನಿರಾಸೆಯಾಗಿದ್ರು..
ಆದ್ರೆ ಅಭಿಮಾನಿಗಳಿಗೆ ಮಾತ್ರವಲ್ಲ , ಕೆಜಿಎಫ್ ಚಾಪ್ಟರ್ 2 ಜೊತೆಗೆ ಟೈ ಅಪ್ ಆಗಲು ಕೆಲ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ.. ಸಿನಿಮಾ ತಂಡ ಪ್ರಾಯೋಜಕತ್ವಕ್ಕಾಗಿ ಖುಷಿ ಜಾಹೀರಾತು ಐಡಿಯಾಸ್ ಸಂಸ್ಥೆ ಜೊತೆಗೆ ಕೈ ಜೋಡಿಸಿದೆ.. ಖುಷಿ ಜಾಹೀರಾತು ಸಂಸ್ಥೆಯ ಸಿಇಒ ವಿಷ್ಣು ತೆಲಂಗ್ “ಕೆಜಿಎಫ್ ಚಾಪ್ಟರ್ 2 ರ ಭಾಗವಾಗಲು ನಾವು ತುಂಬಾ ಖುಷಿಯಾಗಿದ್ದೇವೆ.. ಉತ್ಸುಕರಾಗಿದ್ದೇವೆ.. ಕೆಜಿಎಫ್ ಚಾಪ್ಟರ್ 1, ಹಿಂದೆಂದೂ ಕಾಣದಂತಹ ಮಾಸ್ಟರ್ ಪೀಸ್, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ನಟ ಯಶ್ ಕರ್ನಾಟಕ ಅಥವಾ ದಕ್ಷಿಣ ರಾಜ್ಯಗಳಲ್ಲಿ ಮಾತ್ರವಲ್ಲದೆ ಹಿಂದಿ ಮಾರುಕಟ್ಟೆಗಳಲ್ಲಿಯೂ ಅಭಿಮಾನಿಗಳನ್ನ ದೊಡ್ಡ ಮಟ್ಟದಲ್ಲೇ ಸಂಪಾನೆ ಮಾಡಿದ್ದಾರೆ.. ಯಶ್ ಮತ್ತು ಸಂಜಯ್ ದತ್ ಅವರ ರಾಖಿ – ಅಧೀರನ ಜೋಡಿಯು ಒಂದು ಪವರ್ ಫುಲ್ ಪ್ಯಾಕೇಜ್ ಆಗಿದೆ. ನಾವು ಈಗಾಗಲೇ ಸಿನಿಮಾದೊಂದಿಗೆ ಸಂಬಂಧ ಹೊಂದಲು ಬಯಸುವ ಬ್ರ್ಯಾಂ ಡ್‌ಗಳಿಂದ ಸಾಕಷ್ಟು ಆಸಕ್ತಿಯನ್ನು ನೋಡುತ್ತಿದ್ದೇವೆ ಎಂದಿದ್ದಾರೆ..
ಇನ್ನೂ ಸಂಸ್ಥೆ ಬಗ್ಗೆ ಮಾತನಾಡಿದ ವಿಷ್ಣು ತೆಲಂಗ್ , ಖುಷಿ ಭಾರತದ ಪ್ರಮುಖ ಆಂಬಿಯೆಂಟ್ ಮೀಡಿಯಾ ಏಜೆನ್ಸಿಯಾಗಿದೆ. ವರ್ಷಗಳಲ್ಲಿ ನಾವು ನಮ್ಮ ಹೆಜ್ಜೆಗುರುತನ್ನು ಭಾರತದಾದ್ಯಂತ 21 ನಗರಗಳಿಗೆ ವಿಸ್ತರಿಸಿದ್ದೇವೆ. ಸುಮಾರು 2000 ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಮಾಧ್ಯಮ ಆಸ್ತಿ ಆದಾಯವನ್ನು ತರಲು ನಾವು ಪ್ರಮುಖ ಮಾಲ್‌ಗಳು, ಚಿತ್ರಮಂದಿರಗಳು ಮತ್ತು ವಿಮಾನ ನಿಲ್ದಾಣಗಳ ಅತ್ಯಂತ ಆದ್ಯತೆಯ ಪಾಲುದಾರರಾಗಿದ್ದೇವೆ. ಡಿಜಿಟಲ್ ಮಾರ್ಕೆಟಿಂಗ್ ನಮ್ಮ ಸೇವೆಗಳ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ.
‘ರಾಖಿಭಾಯ್’ ಗೆ ಹೆದರಿದ್ರಾ ಬಾಲಿವುಡ್ ‘ಕ್ವೀನ್’ : ‘ಧಾಕಡ್’ ರಿಲೀಸ್ ಮುಂದೂಡಿಕೆ








