KGF – ಚಾಪ್ಟರ್ 2 ಮದರ್ ಸೆಂಟಿಮೆಂಟ್ ಹಾಡು “ಗಗನ ನೀ” ಬಿಡುಗಡೆ
ಕೆಜಿಎಫ್ ಚಾಪ್ಟರ್ 1 ಸಿನಿಮಾ ಯಾವ ಮಟ್ಟಿಗೆ ಹಿಟ್ ಆಗಿತ್ತೋ ಅದೇ ಮಟ್ಟಿಗೆ ಹಿಟ್ ಆಗಿದ್ದವು ಹಾಡುಗಳು , ರವಿಬಸ್ರೂರ್ ಕೈ ಚಳಕದಲ್ಲಿ ಮೂಡಿಬಂದಿದ್ದ ಹಾಡುಗಳು ದೇಶಾದ್ಯಂತ ಹಿಟ್ ಆಗಿದ್ದವು. ಕೆಜಿಎಫ್ ಚಾಪ್ಟರ್ 2 ನಲ್ಲೂ ಮೊದಲ ಹಾಡು ತೂಫಾನ್ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈಗ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ಚಿತ್ರತಂಡವೇ ಹೇಳಿಕೊಂಡಂತೆ ಇದು ವಾಯ್ಸ್ ಆಫ್ ಮದರ್ .
ಮೊದಲ ಭಾಗದಲ್ಲಿ ಗರ್ಭದಿ ನನ್ನಿರಿಸಿ ಎನ್ನುವ ಸಾಂಗ್ ಬಿಡುಗಡೆಯಾಗಿತ್ತು. ಅದೇ ರೀತಿ ಈ ಭಾರಿ ಗಗನ ನೀ ಭುವನ ನೀ ಎನ್ನುವ ಹಾಡು ಮೂಡಿಬಂದಿದೆ. 5 ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಿದ್ದು, ಲಿರಿಕಲ್ ಹಾಡಿನ ವೀಡಿಯೋ ಎಲ್ಲರನ್ನೂ ಮನಸೂರೆಗಳಿಸಿದೆ.
ನಟಿ ಅರ್ಚನಾ ಜೋಯಿಸ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಕಥಾನಾಯಕನ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ನ ಕೊನೆಯಲ್ಲಿ ಅಮ್ಮ-ಮಗನ ನಡುವೆ ನಡೆಯುವ ಸಂಭಾಷಣೆ ಕೂಡ ಹೈಲೈಟ್ ಆಗಿದೆ. ಈಗ ತಾಯಿ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಗಗನ ನೀ..’ ಹಾಡು ಸುಚೇತಾ ಬಸ್ರೂರು ಅವರ ಕಂಠದಲ್ಲಿ ಮೂಡಿಬಂದಿದೆ. ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್ಗಳಲ್ಲಿ ಸಾಂಗ್ ರಿಲೀಸ್ ಆಗಿದೆ. ತಮಿಳಿನಲ್ಲಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ. ಹಿಂದಿ ಮತ್ತು ತೆಲುಗು ವರ್ಷನ್ ಕೂಡ ಸುಚೇತಾ ಬಸ್ರೂರು ಹಾಡಿದ್ದಾರೆ.








