ಕೆಜಿಎಫ್ ತೂಫಾನ್ – ಎರಡೇ ದಿನದಲ್ಲಿ ವಿಶ್ವಾದ್ಯಂತ 304 ಕೋಟಿ ಗಳಿಸಿದ ಚಿತ್ರ…
ರಾಕಿ ಬಾಯ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಹಿಂದಿ ಬೆಲ್ಟ್ ನಲ್ಲಿ ಎರಡನೇ ದಿನ 46.79 ಕೋಟಿ ರುಪಾಯಿಗಳನ್ನ ಕಮಾಯಿ ಮಾಡಿದೆ ಕೆಜಿಎಫ್. ಕೇವಲ ಎರಡೇ ದಿನಗಳಲ್ಲಿ ಹಿಂದಿ ಭಾಷೆಯ ಅವತರಣಿಕೆಯಿಂದ 100.74 ಕೋಟಿ ಬ್ಯುಸಿನೆಸ್ ಮಾಡಿದೆ. ಎರಡೆ ದಿನಗಳಲ್ಲಿ 100 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಬಾಹುಬಲಿ-2 ಎರಡು ದಿನದಲ್ಲಿ ಸುಮಾರು 81 ಕೋಟಿ ಗಳಿಸಿತ್ತು.
ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ 165 ಕೋಟಿ. ಎರಡನೇ ದಿನ 139.25 ಕೋಟಿ ರೂ. ಎರಡು ದಿನದ ಒಟ್ಟು ವ್ಯವಹಾರ 304 ಕೋಟಿ ರೂ. ಸುಮಾರು 100 ಕೋಟಿ ಬಜೆಟ್ನಲ್ಲಿ ತಯಾರಾದ ಕೆಜಿಎಫ್ ಭಾರತೀಯ ಚಲನಚಿತ್ರರಂಗದಲ್ಲಿ ದಾಖಲೆಯನ್ನೇ ಬರೆದಿದೆ.
ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಕೆಜಿಎಫ್ -2 ಹಿಂದಿ ಬಾಕ್ಸ್ ಆಫೀಸ್ನಲ್ಲಿ ಸುನಾಮಿಯಂತೆ ಅಪ್ಪಳಿಸಿದೆ. ಎರಡನೇ ದಿನ ಅಂದರೆ ಶುಕ್ರವಾರ 46.79 ಕೋಟಿ ಕಲೆಕ್ಷನ್ ಮಾಡಿದ್ದು, ಮೊದಲ ದಿನವೇ 53.95 ಕೋಟಿ ಕಲೆಕ್ಷನ್ ಮಾಡಿದೆ.
ಬಾಕ್ಸ್ ಆಫೀಸ್ ಪಂಡಿತರಾದ ಮನೋಬಾಲಾ ವಿಜಯಬಾಲನ್ ಅವರ ಪ್ರಕಾರ ಚಿತ್ರ ತಮಿಳುನಾಡು ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 8.24 ಕೋಟಿಗಳಿಸಿದರೆ ಎರಡನೇ ದಿನ 10.61 ರೂಪಾಯಿ ಗಳಿಸಿದೆ. ಇದರೊಂದಿಗೆ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ 18.85 ಕೋಟಿ ಗಳಿಸಿದೆ..
ಸೂಪರ್ಸ್ಟಾರ್ ರಜನಿಕಾಂತ್ ಅವರು ಕೆಜಿಎಫ್ -2 ಚಿತ್ರವನ್ನ ಚೆನೈನಲ್ಲಿ ನೊಡಿದ್ದಾರೆ. ಬ್ಲಾಕ್ಬಸ್ಟರ್ ಚಿತ್ರಕ್ಕಾಗಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ ಎಂದು ಮನೋಬಾಲಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಅವರು ಕೆಜಿಎಫ್ -2 ಚಿತ್ರವನ್ನ ನೋಡಿ ಬ್ಲಾಕ್ಬಸ್ಟರ್ ಚಿತ್ರಕ್ಕಾಗಿ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ ಎಂದು ಮನೋಬಾಲಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
KGF-2 Tsunami : Worldwide earned 304 crores in two days, Hindi version first film to earn 100 crores in two days