KGF 2 ಟ್ರೇಲರ್ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿ ಏನು..?? ನಂಬಬೇಡಿ ಎಂದಿದ್ಯಾಕೆ ಸಿನಿಮಾತಂಡ..??
ಏಪ್ರಿಲ್ 14 ರಂದು ಸಿನಿಮಾರಂಗದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿಸಲು ಬರುತ್ತಿರುವ ರಾಕಿಂಗ್ ಯಶ್ – ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ ಸಿನಿಮಾದ ಅಪ್ ಡೇಟ್ಸ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.. ಇನ್ನೂ ಕೆಲವರಂತೂ ಕೆಜಿಎಫ್ ಸಿನಿಮಾದ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸುತತ್ತಿದ್ದು ಸಿನಿಮಾತಂಡಕ್ಕೆ ತಲೆನೋವಾಗಿಬಿಟ್ಟಿದೆ..
ಹೌದು.. ಇತ್ತೀಚೆಗೆ ಕೆಜಿಎಫ್ ಸಿನಿಮಾ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಅಧಿಕೃತವಾಗಿ ಟ್ವೀಟ್ ಒಂದನ್ನ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.. ಟ್ವೀಟ್ ನಲ್ಲಿ ವೋಟಿಂಗ್ ಆಪ್ಷನ್ ನೀಡಿತ್ತು.. ನಿಮಗೆ ಸಿನಿಮಾದ ಯಾವ ಅಪ್ ಡೇಟ್ ಬೇಕು..?? ಹಾಡು,,??? ಟ್ರೇಲರ್ ಅಥವ ಸರ್ಪ್ರೈಸ್ ಅಪ್ ಡೇಟ್ ಬೇಕಾ ಎಮದು ಕೆಜಿಎಫ್ ಆರ್ಮಿಯನ್ನ ಕೇಳಿತ್ತು.. ಹೆಚ್ಚು ಜನರು ಟ್ರೇಲರ್ ಕೇಳಿ ವೋಟ್ ಮಾಡಿದ್ದರಿಂದ ಸಿನಿಮಾ ತಂಡವು ಟ್ರೇಲರ್ ರಿಲೀಸ್ ಮಾಡಲು ತಯಾರಿ ನಡೆಸಿಕೊಳ್ತಿದೆ.
ಈ ಬಗ್ಗೆ ಟಟ್ವಿಟ್ ಮಾಡಿ ಶೀಘ್ರವೇ ಟ್ರೇಲರ್ ರಿಲೀಸ್ ಮಾಡುವುದಾಗಿ ತಿಳಿಸಿದೆ.. ಆದ್ರೆ ಕೆಲವರು ಇದೀಗ ಟ್ರೇಲರ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.. ಈ ಸಿನಿಮಾದ ಟ್ರೇಲರ್ ಮಾರ್ಚ್ 08 ರಂದು ಸಂಜೆ 6:12 ಕ್ಕೆ ಬಿಡುಗಡೆ ಆಗುತ್ತದೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.
ಆದರೆ ಈ ಸುದ್ದಿ ಸುಳ್ಳು ಎಂದು ಸ್ವತಃ ಚಿತ್ರತಂಡ ಸ್ಪಷ್ಟಪಡಿಸಿದೆ. ಟ್ರೇಲರ್ ಬಿಡುಗಡೆ ಬಗ್ಗೆ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವೀಟ್ ಮಾಡಿ , ಕೆಜಿಫ್ 2 ಟ್ರೇಲರ್ ಬಗ್ಗೆ ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಸಿನಿಮಾದ ಕುರಿತಾದ ಸುದ್ದಿಗಳು ಅಧಿಕೃತ ಖಾತೆಗಳಿಂದಷ್ಟೆ ಬರುತ್ತವೆ ಸ್ಪಷ್ಟಪಡಿಸಿದ್ದಾರೆ.