ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಜೊತೆ ನಟಿಸುವೆ ಆಸೆ – ಯಶ್
ದಕ್ಷಿಣ ಸಿನಿಮಾಗಳ ಸತತ ಗೆಲುವು; ಬಾಲಿವುಡ್ ಸಿನಿಮಾಗಳ ಸಾಲು ಸಾಲು ಸೋಲು ಸೌತ್ VS ಬಾಲಿವುಡ್ ಎಂಬ ಪೈಪೋಟಿ ಹುಟ್ಟುಹಾಕಿದೆ. ಈ ಮಧ್ಯೆ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯನ್ನ ಹೊಗಳಿದ್ದಾರೆ. ಮತ್ತು ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗಸ್ಟ್ 20 ರಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದಿಕಿಯನ್ನ ಹೊಗಳಿ; ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ, ನೀವು ಯಾವ ಬಾಲಿವುಡ್ ನಟರೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಯಶ್ ಅವರನ್ನ ನಿರೂಪಕರು ಪ್ರಶ್ನೆಕೇಳಿದ್ದಕ್ಕೆ “ನವಾಜುದ್ದೀನ್ ಸಿದ್ದಿಕಿ ಒಬ್ಬ ಉತ್ತಮ ಕಲಾವಿದ, ನಾನು ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ’ ಎಂದು ಯಶ್ ಹೇಳಿದ್ದಾರೆ.
ಹಲವು ದಾಖಲೆಗಳನ್ನ ಮುರಿದಿದ ಕೆಜಿಎಫ್ 2
ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಬಾಕ್ಸ್ ಆಫೀಸ್ನಲ್ಲಿ ತಲ್ಲಣ ಸೃಷ್ಟಿಸಿತ್ತು. ಚಿತ್ರ ದೇಶಾದ್ಯಂತ 900 ಕೋಟಿ ಕಲೆಕ್ಷನ್ ಮಾಡಿತ್ತು. ಇದು ವಿಶ್ವದಾದ್ಯಂತ $ 27 ಮಿಲಿಯನ್ ಗಳಿಸಿದೆ.
ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ನ ಪ್ರಸಿದ್ಧ ವ್ಯಕ್ತಿತ್ವ. ಅವರ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮೆಚ್ಚುಗೆ ಪಡೆದಿವೆ. ರಮಣ್ ರಾಘವ್ 2.0, ಮಾಂಟೊ, ಸೀರಿಯಸ್ ಮ್ಯಾನ್, ಗ್ಯಾಂಗ್ಸ್ ಆಫ್ ವಾಸೇಪುರ್, ಮಾಂಝಿ ದಿ ಮೌಂಟೇನ್ ಮ್ಯಾನ್, ಕಿಕ್, ರೈಸ್ ಮತ್ತು ಮಾಮ್ ಮುಂತಾದ ಚಿತ್ರಗಳಲ್ಲಿ ನಟ ಅತ್ಯುತ್ತಮ ಅಭಿನಯ ನೀಡಿದ್ದಾರೆ.
ಇದಲ್ಲದೇ ಈ ವರ್ಷ ಟಿಕು ವೆಡ್ಸ್ ಶೇರು, ಅಮೇಜಿಂಗ್ ಮತ್ತು ನೂರಾನಿ ಚೆಹ್ರಾ ಚಿತ್ರಗಳಲ್ಲಿ ನವಾಜ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್ 2 ಮೂಲಕ ದೇಶಾದ್ಯಂತ ತಮ್ಮ ಛಾಪು ಮೂಡಿಸಿರುವ ಯಶ್. ಇವರಿಬ್ಬರನ್ನ ತೆರೆಯ ಮೇಲೆ ಒಟ್ಟಿಗೆ ನೋಡುವುದೇ ಮಜವಾಗಿರಲಿದೆ.