RRR, ಜೈಭೀಮ್ ಚಿತ್ರಗಳ ದಾಖಲೆ ಮುರಿದ ಕೆಜಿಎಫ್ IMDB ಯಲ್ಲಿ ಅತಿಹೆಚ್ಚು ರೇಟಿಂಗ್
ಕನ್ನಡದ ಹಲವು ಮೊದಲುಗಳಿಗೆ ಭಾಷ್ಯ ಬರೆದ ಚಿತ್ರ ‘ಕೆಜಿಎಫ್ ಚಾಪ್ಟರ್ 2’. ಇಡೀ ಭಾರತೀಯ ಚಿತ್ರರಂಗವನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ. ಬಾಲಿವುಡ್ ಬಿಗ್ ಸ್ಟಾರ್ ಬಿಗ್ ಬಜೆಟ್ ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಮೂಡಿಬಂದ ಚಿತ್ರ ಹಲವು ದಾಖಲೆಗಳನ್ನ ವಶಮಾಡಿಕೊಳ್ಳುತ್ತಿದೆ.
ಕೆಜಿಎಫ್’ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಟಿಕೆಟ್ ಬುಕ್ಕಿಂಗ್ ನಲ್ಲಿ , ಮಧ್ಯರಾತ್ರಿ ಶೋಗಳಲ್ಲಿ ಅಭಿಮಾನಿಗಳ ಸಂಖ್ಯೆಯಲ್ಲಿನ ಹೆಚ್ಚಳದಲ್ಲಿ ಎಲ್ಲದರಲ್ಲಿಯೂ ದಾಪುಗಾಲಿಡುತ್ತಿದೆ. ಗುರುವಾರದಂದು ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಚಿತ್ರ IMDbಯಲ್ಲಿ ಅಗ್ರ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ 2ನೇ ಅತಿ ಹೆಚ್ಚು ರೇಟಿಂಗ್ ಪಡೆದ ಚಲನಚಿತ್ರವಾಗಿದೆ.
ಕೆಜಿಎಫ್: ಚಾಪ್ಟರ್ 2 ಚಿತ್ರ, ‘RRR’, ‘ಜೈ ಭೀಮ್’ ಮತ್ತು ‘ಅನ್ಬೆ ಶಿವಂ’ ಚಿತ್ರಗಳನ್ನ ಹಿಂದಿಕ್ಕಿ IMDbನಲ್ಲಿ ನಂ. 1 ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಕೆಜಿಎಫ್ 2 ಚಿತ್ರ ಐಎಂಡಿಬಿನಲ್ಲಿ 10ಕ್ಕೆ 9.8 ರೇಟಿಂಗ್ ಪಡೆದಿದೆ.
5 ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಎಲ್ಲಾ ಭಾಷೆಗಳಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಚಿತ್ರ ಹಿಂದೆಬಿದ್ದಿಲ್ಲ. ಕೆಜಿಎಫ್-2 ಚಿತ್ರದ ಮೊದಲ ದಿನದ ವರ್ಲ್ಡ್ ವೈಡ್ ಕಲೆಕ್ಷನ್ 165 ಕೋಟಿ. ಎರಡನೇ ದಿನ 139.25 ಕೋಟಿ ರೂ. ಎರಡು ದಿನದ ಒಟ್ಟು ವ್ಯವಹಾರ 304 ಕೋಟಿ ರೂ. ಸುಮಾರು 100 ಕೋಟಿ ಬಜೆಟ್‌ನಲ್ಲಿ ತಯಾರಾದ ಕೆಜಿಎಫ್ ಭಾರತೀಯ ಚಲನಚಿತ್ರರಂಗದಲ್ಲಿ ದಾಖಲೆಯನ್ನೇ ಬರೆದಿದೆ.








