ಬರೆದಿಟ್ಟುಕೊಳ್ಳಿ ಕೆಜಿಎಫ್ – 2 ಕ್ಲೈಮಾಕ್ಸ್ ಇದೇ.. never before ever after
ಕೆಜಿಎಫ್ – 2..! ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲ, ಇಡೀ ವಿಶ್ವವೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಿನಿಮಾ. ಕೆಜಿಎಫ್ – 2 ಸಿನಿಮಾ ಈಗ ಕೇವಲ ಒಂದು ಕನ್ನಡ ಸಿನಿಮಾ ಆಗಿ ಉಳಿದಿಲ್ಲ. ಇದು ಸದ್ಯ ಯೂಸಿರ್ವಸಲ್ ಸಿನಿಮಾ. ಸದ್ಯ ರಿಲೀಸ್ ಆಗಿ ಯುಟ್ಯೂಬ್ ಗೆ ಬೆಂಕಿ ಹಚ್ಚಿರೋ ಕೆಜಿಎಫ್ ಟೀಸರ್ ಇದನ್ನ ರುಜು ಮಾಡಿದೆ.
ಕೆಜಿಎಫ್, ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್.. ಹೀರೋಯಿಸಂಗೆ ಕೆಜಿಎಫ್ ಸಿನಿಮಾ, ರಾಖಿಭಾಯ್ ಕ್ಯಾರೆಕ್ಟರ್ ಕೇಪ್ ಆಫ್ ಅಡ್ರೆಸ್.. ಕಮರ್ಷಿಯಲ್ ಸಿನಿಮಾಗಳಿಗೆ ಕೆಜಿಎಫ್ ಒಂದು ಲೈಬ್ರರಿ.. ಹೀರೋ ಓರಿಯಂಟೆಡ್, ಕಂಟೆಂಟ್ ಬೇಸ್ಡ್, ಸ್ಕೀನ್ ಪ್ಲೇಗೆ ಪ್ರಶಾಂತ್ ನೀಲ್ ಮಾಸ್ಟರ್.. ಒಂದು ಮಾತಿನಲ್ಲಿ ಹೇಳೋದಾದ್ರೆ… ಕೆಜಿಎಫ್ ಸಿನಿಮಾ never before ever after..
ಅಂದ್ಹಾಗೆ ಕೆಜಿಎಫ್-1 ರಲ್ಲಿ ಗರುಡನ ಕೊಲೆಯೊಂದಿಗೆ ಸಿನಿಮಾ ಅಂತ್ಯವಾಗುತ್ತದೆ. ಆದ್ರೆ ಅಸಲಿ ಕಹಾನಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ನಲ್ಲಿಟ್ಟಿದ್ದಾರೆ. ಕೆಜಿಎಫ್ 2 ನೇ ಭಾಗ ಇನ್ನಷ್ಟು ರಸವತ್ತಾಗಿ ಇರಲಿದ್ದು, ಕೌತುಕ ಮೂಡಿಸಿರುವ ಅದರ ಕ್ಲೈಮ್ಯಾಕ್ಸ್ ಹೇಗಿರಲಿದೆ ಎಂಬುದರ ಸಣ್ಣ ವಿಶ್ಲೇಷಣೆ ಇಲ್ಲಿದೆ..
ಸದ್ಯ ರಿಲೀಸ್ ಆಗಿರುವ ಟೀಸರ್ ಅನ್ನ ಹಾಗೂ ಕೆಲ ಮೂಲಗಳಿಂದ ಬಂದಿರುವ ಮಾಹಿತಿಯನ್ನ ಬೇಸ್ ಮಾಡಿಕೊಂಡು ಕೆಜಿಎಫ್ 2 ಸಿನಿಮಾ ಹೇಗಿರಲಿದೆ ಅನ್ನೋದನ್ನ ನಾವಿಲ್ಲ ವಿವರಿಸ್ತಾ ಹೋಗ್ತೀವಿ…
ಕೆಜಿಎಫ್-2 ಸಿನಿಮಾದ ಟೀಸರ್ ನಲ್ಲಿ ಪ್ರಶಾಂತ್ ನೀಲ್ ಅವರು ಚಿತ್ರದ ಪ್ರಮುಖ ಪಾತ್ರಗಳ ಪರಿಚಯ ಮಾಡಿದ್ದಾರೆ. ಅದ್ರಲ್ಲಿ ಅತೀ ಮುಖ್ಯವಾದ ಪಾತ್ರ ಅಧೀರ..! ಅಧೀರ ಮುಖವನ್ನ ಟೀಸರ್ ನಲ್ಲಿ ಪ್ರಶಾಂತ್ ನೀಲ್ ಅವರು ರಿವೀಲ್ ಮಾಡಿಲ್ಲ. ಆದ್ರೂ ಅವರ ಲುಕ್ ಭಯಂಕರಃ.. ಭಯಂಕರಸ್ಯ… ಭಯಂಕರಭ್ಯಾಃ..
ಕೆಜಿಎಫ್ ಚಾಪ್ಟರ್ ಒಂದರಲ್ಲಿ ಯಾರಿಗೂ ಕಾಣದೇ ಅಣ್ಣನ ಸಾವಿಗೆ ಸ್ಕೇಚ್ ಹಾಕಿ ಕಥೆ ನಡೆಸಿದ್ದ ಅಧೀರ, 2ನೇ ಭಾಗದಲ್ಲಿ ರಾಕಿಭಾಯ್ ಗೆ ಎದುರಾಗೋದು ಪಕ್ಕಾ. ಇದು ರಾಕಿಭಾಯ್ ಸಹ ಊಹಿಸಿರೋದಿಲ್ಲ.
ಯಾಕೆಂದರೆ ರಾಕಿಭಾಯ್ ಗೆ ಅಧೀರನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಸದ್ಯ ನಾವೆಲ್ಲರೂ ನೋಡಿದ ಕೆಜಿಎಫ್-1 ಸಿನಿಮಾದಲ್ಲಿ ರಾಕಿಭಾಯ್ ಗರುಡನನ್ನೇ ಟಾರ್ಗೆಟ್ ಮಾಡಿದ್ದಾನೆಯೇ ಹೊರೆತು ಅಧೀರನ್ನಲ್ಲ.
ರಾಕಿಭಾಯ್ ನರಾಚಿಯನ್ನ ವಶಪಡಿಸಿಕೊಳ್ಳೋಕೆ ಗರುಡ ಒಬ್ಬ ಮಾತ್ರ ಅಡ್ಡಿ ಇದ್ದಾನೆ. ಅವನನ್ನ ಮುಗಿಸಿದ್ರೆ ನರಾಚಿಯನ್ನ ವಶಪಡಿಕೊಳ್ಳಬಹುದು ಅಂತ ಯೋಚ್ನೆ ಮಾಡಿ ಗರುಡನನ್ನ ಮುಗಿಸ್ತಾನೆ. ಹೀಗಾಗಿ ರಾಖಿಭಾಯ್ ಗೆ ಅಧೀರನ ಬಗ್ಗೆ ಕಿಂಚಿಂತೂ ಮಾಹಿತಿ ಇರಲ್ಲ.
ಇನ್ನು ಕೆಜಿಎಫ್ 1 ರಲ್ಲಿ ಭಾರಿ ಆಕ್ಷನ್ ಸನ್ನಿವೇಶಗಳನ್ನು ಇಟ್ಟಿದ್ದ ಪ್ರಶಾಂತ್ ನೀಲ್, ಭಾಗ ಎರಡರಲ್ಲೂ ಅದನ್ನು ಮುಂದುವರಿಸ್ತಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಚಿತ್ರದ ಮೊದಲ ಭಾಗದಲ್ಲಿ ರಾಖಿ ಭಾಯ್ ನರಾಚಿಯನ್ನು ವಶಪಡಿಸಿಕೊಂಡು ಅಲ್ಲಿನ ಜನರನ್ನು ಬಂಧಮುಕ್ತಿ ಮಾಡುತ್ತಾನೆ.
ಈ ವೇಳೆ ನರಾಚಿ ಮೇಲೆ ಕಣ್ಣಿಟ್ಟಿರುವ ಅಧೀರ, ರಾಖಿ ಭಾಯ್ ನನ್ನ ಲೆಕ್ಕಿಸದೇ, ಅವನ ತಾಖತ್ತನ್ನ ಊಹಿಸದೇ ಅಜ್ಞಾತದಲ್ಲಿ ಇದ್ದುಕೊಂಡೇ ಆಟ ಶುರು ಮಾಡ್ತಾನೆ. ಇದರಿಂದ ರಾಖಿಭಾಯ್ ಸ್ವಲ್ಪ ವಿಚಲಿತನಾಗ್ತಾನೆ. ತನ್ನವರೆಲ್ಲರೂ ಆತನಿಂದ ದೂರ ಆಗಬಹುದು. ಯಾಕೆಂದ್ರೆ ಗರುಡನ ಸಾವಿನ ಬಳಿಕ ನರಾಚಿಯಲ್ಲಿ ನಡೆಯೋ ಪ್ರತಿಯೊಂದಕ್ಕೂ ರಾಖಿಭಾಯ್ ಹೊಣೆ ಆಗಿರ್ತಾನೆ ಅಲ್ವಾ..?
ಇದರಿಂದ ರಾಖಿಭಾಯ್ ಅಧೀರನ ಜಾಡು ಹುಡುಕಲು ಆರಂಭಿಸುತ್ತಾನೆ. ಈ ಹಂತದಲ್ಲಿ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಅಧೀರ ರಾಖಿಭಾಯ್ ಗೆ ಎದುರಾಗುತ್ತಾನೆ. ಇನ್ನ ರಾಖಿಭಾಯ್ ಮತ್ತು ಅಧೀರನ ದಂಗಲ್ ಹೇಗಿರಲಿದೆ ಅನ್ನೋದನ್ನ ನಾವು ಸಿನಿಮಾದಲ್ಲೇ ನೋಡಬೇಕು.
ಇನ್ನು ದ್ವಿತೀಯಾರ್ಧದಲ್ಲಿ ರಾಕಿ ಭಾಯ್ ನ ಆರ್ಭಟ ಮತ್ತಷ್ಟು ಜೋರಾಗುತ್ತೆ. ಇಡೀ ಇಂಡಿಯಾವನ್ನ ತನ್ನ ಅತೋಟಿಯಲ್ಲಿ ಇಟ್ಟುಕೊಳ್ಳೋ ಉದ್ದೇಶದಿಂದ ಕಾನೂನಿಗೆ ಬೆಲೆ ಕೊಡ್ದೆ ಅಬ್ಬರಿಸುತ್ತಾನೆ. ಹೀಗಾಗಿ ಪ್ರಧಾನಿ ರಸಿಕಾ ಸೇನ್ ರಾಖಿಭಾಯ್ ಕೋಟೆ ಬೇಧಿಸಲು ಸೇನೆಯನ್ನು ಕಳುಹಿಸುತ್ತಾಳೆ. ಈ ವೇಳೆ ಸೇನೆ ವಿರುದ್ಧ ರಾಕಿಭಾಯ್ ಪಡೆ ಹೋರಾಡುತ್ತದೆ. ಈ ದೃಶ್ಯಗಳು ತುಂಬಾ ರೋಚಕತೆಯಿಂದ ಕೂಡಿರಲಿದೆ.
ಇನ್ನ ಚಿತ್ರದ ಪೂರ್ತಿ ಅಬ್ಬರಿಸಿ ಬೊಬ್ಬಿರಿಯೋ ರಾಕಿ ಭಾಯ್, ಕ್ಲೈಮ್ಯಾಕ್ಸ್ ನಲ್ಲಿ ಅಧೀರ ಜೊತೆ ಸೆಣಸಾಡುತ್ತಾನೆ. ಅಧೀರನ ಸಾವಿನ ಬಳಿಕ ಸೇನೆಯಿಂದಲೇ ರಾಖಿಭಾಯ್ ದುರಂತ ಅಂತ್ಯ ಕಾಣಲಿದ್ದಾನೆ.
ರಾಖಿಭಾಯ್ ಚಿಕ್ಕಂದಿನಲ್ಲಿ ಅಮ್ಮ ಹೇಳಿದಂತೆಯೇ ಶ್ರೀಮಂತನಾಗಿ ಜನರನ್ನು ಜೀತದಿಂದ ಮುಕ್ತಗೊಳಿಸಿ ಸಾಯುತ್ತಾನೆ. ಇಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಎಮೋಷನ್ ಟಚ್ ನೀಡಲಿದ್ದಾರೆ.
ಯಾಕೆಂದ್ರೆ ರಾಖಿಭಾಯ್ ಹೀರೋನಾ ಅಥವಾ ವಿಲನ್ನಾ ಅನ್ನೋ ಪ್ರಶ್ನೆಗೆ ಕ್ಲೈಮ್ಯಾಕ್ಸ್ ನಲ್ಲಿ ಪ್ರಶಾಂತ್ ಪ್ರೇಕ್ಷಕನ ಕಣ್ಣಲ್ಲಿ ನೀರು ಜಿನುಗಿಸುವ ಮೂಲಕ ಉತ್ತರ ನೀಡಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel