KGF-2 ದಾಖಲೆ ಪೀಸ್ ಪೀಸ್ ಮಾಡಿದ RRR – ಲಹರಿಗೆ ಭಾರೀ ಮತ್ತೊಮ್ಮೆ ಆಡಿಯೋ ಹಕ್ಕು ಮಾರಾಟ..!
ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರುನೋಡ್ತಿರುವ ಸಿನಿಮಾ ನಮ್ಮ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ KGF 2.. ಈ ಸಿನಿಮಾ ದೊಡ್ಡ ದೊಡ್ಡ ಸಿನಿಮಾಗಳ ರೆಕಾರ್ಡ್ ಮುರಿದಿದೆ.. ಟೀಸರ್ ವಿಶ್ವ ದಾಖಲೆ ಮಾಡಿದೆ.. ಇತ್ತೀಚೆಗೆ ಲಹರಿ ಸಂಸ್ಥೆ ಸಿನಿಮಾ ಭಾರೀ ಮೊತ್ತಕ್ಕೆ KGF 2 ಸಿನಿಮಾದ ಆಡಿಯೋವನ್ನ ಖರೀದಿ ಮಾಡಿತ್ತು. ಈ ಮೂಲಕ ಬಾಹುಬಲಿ ರೆಕಾರ್ಡ್ ಪೀಸ್ ಪೀಸ್ ಮಾಡಿತ್ತು. ಅಲ್ಲದೇ ಅತಿ ಹೆಚ್ಚು ಮೊತ್ತಕ್ಕೆ ಮಾರಟವಾದ ಹೆಗ್ಗಳಿಕೆಗೆ ಪಾತ್ರವಾಗಿತ್ತು..
ಆದ್ರೆ ಈ ದಾಖಲೆ ಮಾಡಿದ ಕೆಲವೇ ದಿನಗಳಲ್ಲೇ ಮತ್ತೊಂದು ಬಹುನಿರೀಕ್ಷೆಯ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ RRR ಸಿನಿಮಾ ಈಗ KGF 2 ರೆಕಾರ್ಡ್ ಬ್ರೇಕ್ ಮಾಡಿದೆ..
ಹೌದು RRR ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ ಎನ್ನುವ ಭರ್ಜರಿ ಸುದ್ದಿ ಹೊರಬಿದ್ದಿದೆ. ಆರ್ ಆರ್ ಆರ್ ಸಿನಿಮಾದ ಆಡಿಯೋವನ್ನು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಖರೀದಿ ಮಾಡಿದೆ. ಐದಕ್ಕಿಂತ ಹೆಚ್ಚು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಆಡಿಯೋಗೆ 25 ಕೋಟಿ ರೂ. ನೀಡುವ ಮೂಲಕ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ.
ಈ ಮೊದಲು ಲಹರಿ ಸಂಸ್ಥೆ ಕೆಜಿಎಫ್-2 ಸಿನಿಮಾದ ಆಡಿಯೋವನ್ನು 7.20 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದೀಗ ಆರ್ ಆರ್ ಆರ್ ಸಿನಿಮಾದ ಆಡಿಯೋವನ್ನು 25 ಕೋಟಿಗೆ ಖರೀದಿ ಮಾಡುವ ಮಾಡುವ ಮೂಲಕ ಕೆಜಿಎಫ್-2 ಚಿತ್ರದ ದಾಖಲೆಯನ್ನು ಮುರಿದಿದೆ. ಆಡಿಯೋ ಖರೀದಿ ಮಾಡಿದ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಎಷ್ಟು ಮೊತ್ತಕ್ಕೆ ಕೊಂಡುಕೊಂಡಿದೆ ಎನ್ನುವ ಮಾಹಿತಿಯನ್ನು ಲೀಕ್ ಮಾಡಿಲ್ಲ.
ಆರ್ ಆರ್ ಆರ್ ಸಿನಿಮಾಗೆ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನ ಅಜಯ್ ದೇವಗನ್ ,ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.