ಹಾಸನ: ಮನೆಯೊಂದಕ್ಕೆ ನುಗ್ಗಿರುವ ಖದೀಮರು 15 ಲಕ್ಷ ರೂ. ಚಿನ್ನ ಹಾಗೂ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಎಗರಿಸಿ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನಗರದ (Hassan) ಹೊಸ ಬಸ್ ನಿಲ್ದಾಣದ ಎದುರಿನ ಕೆಹೆಚ್ಬಿ ಬಡಾವಣೆಯಲ್ಲಿ ನಡೆದಿದೆ. ಸಚಿನ್ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸಚಿನ್ ಅವರ ಪತ್ನಿ ಸರ್ಕಾರಿ ನೌಕರರಾಗಿದ್ದು ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ನಂತರ ಪತಿ ಸಚಿನ್ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ, ಸಂಜೆ ಮರಳಿ ಬಂದಿದ್ದರು.
ಆತಂಕದಿಂದ ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಲ್ಮೆಟ್ ಧರಸಿ ಬಂದಿರುವ ಕಳ್ಳ ಮನೆಯ ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಸಿಸಿಟಿವಿ ಇಲ್ಲದ ಜಾಗವನ್ನು ನೋಡಿ ಆ ಕಡೆಯಿಂದ ಕಳ್ಳ ಒಳಗೆ ಬಂದಿದ್ದಾನೆ. ಕಳ್ಳತನ ಮಾಡಿಕೊಂಡು ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.