ಬೆಂಗಳೂರು: ನಗರದಲ್ಲಿ ಕಳ್ಳರಿಗೆ ಯಾವ ಭಯವೂ ಇಲ್ಲದಂತಾಗಿದೆ ಅನಿಸುತ್ತಿದೆ. ಸಿಸಿಟಿವಿಗಳಿರುತ್ತವೆ ಎಂಬ ಭಯವೂ ಹಲವರಿಗೆ ಇಲ್ಲದಾಗಿದೆ.
ಇತ್ತೀಚೆಗೆ ಸರ್ಜಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ ಸ್ಕೂಟಿಯನ್ನೇ ಖದೀಮರು ಕದ್ದ (Theft) ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಲಿಕಾನ್ ಸಿಟಿಯ ಸರ್ಜಾಪುರದ (Sarjapura) ಸಂಪುರ ಗೇಟ್ ಹತ್ತಿರ ಮನೆ ಮಂದೆ ನಿಲ್ಲಿಸಿದ ಸ್ಕೂಟಿಯನ್ನ ಮೂವರು ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ. ನಂತರ ಆರಾಮಾಗಿ ಸ್ಕೂಟರ್ ಅನ್ನು ಸಂಪುರ ಗೇಟ್ ನಿಂದ ದೊಮ್ಮಸಂದ್ರದ ಕಡೆಗೆ ತಳ್ಳಿಕೊಂಡೆ ಹೋಗಿದ್ದಾರೆ. ಕಳ್ಳರ ಈ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನದ ಎರಡು ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೊಮ್ಮಸಂದ್ರದ ಕಡೆ ತಳ್ಳಿಕೊಂಡು ಹೋಗುವ ದೃಶ್ಯ ಹಾಗೂ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ ದೃಶ್ಯವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಖದೀಮರಿಗಾಗಿ ಹುಡುಕಾಟ ಮುಂದುವರೆದಿದೆ.