ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ನಿಷೇಧಿತ ಖಲಿಸ್ತಾನಿ ಸಂಘಟನೆಯಿಂದ ಸಿಖ್ಸ್ ಫಾರ್ ಜಸ್ಟಿಸ್ನಿಂದ ಆಡಿಯೋ ಸಂದೇಶದ ರೂಪದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸ್ ಇಲಾಖೆ, ಆಡಿಯೋ ಕ್ಲಿಪ್ ಪರಿಶೀಲಿಸುತ್ತಿದ್ದು, ಅಲರ್ಟ್ ಆಗಿರುವಂತೆ ಎಲ್ಲಾ ಜಿಲ್ಲೆಗಳ ಪೊಲೀಸರಿಗೂ ಎಚ್ಚರಿಕೆ ನೀಡಿದೆ. ಆಡಿಯೊ ಕ್ಲಿಪ್‌ನಲ್ಲಿ, ತಾನು ಸ್ಪೀಕರ್ ಸಿಖ್ ಫಾರ್ ಜಸ್ಟಿಸ್ ನ ಗುರುಪತ್ವಾನ್ ಸಿಂಗ್ ಪನ್ನುನ್ ಎಂದು ಹೇಳಿಕೊಂಡಿದ್ದಾನೆ. ಅಸ್ಸಾಂ ಜೈಲಿನಲ್ಲಿರುವ ಅಮೃತಪಾಲ್ ಸಿಂಗ್ನ ಸಹಚರರಿಗೆ ಅಸ್ಸಾಂ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾನೆ.
ಈ ಸಂದೇಶವು ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರಿಗೆ ಆಗಿದೆ. ನಿಮ್ಮ ಸರ್ಕಾರವು ಅಸ್ಸಾಂನಲ್ಲಿ ಖಲಿಸ್ತಾನ್ ಪರ ಸಿಖ್ಖರಿಗೆ ಕಿರುಕುಳ ನೀಡುತ್ತಿದೆ ಮತ್ತು ಚಿತ್ರಹಿಂಸೆ ನೀಡುತ್ತಿದೆ. ಜೊತೆಗೆ ಜೈಲಿನಲ್ಲಿರುವವರನ್ನೂ ಹಿಂಸಿಸುತ್ತಿದೆ. ಎಚ್ಚರಿಕೆಯಿಂದ ಆಲಿಸಿ ಸಿಎಂ ಶರ್ಮಾ, ಖಲಿಸ್ತಾನ್ ಪರ ಸಿಖ್ಖರು ಮತ್ತು ಭಾರತೀಯ ಆಡಳಿತದ ನಡುವಿನ ಹೋರಾಟ. ಈ ವಿಚಾರದಲ್ಲಿ ತಲೆಹಾಕಬೇಡಿ ಎಂದು ಆತ ಆಡಿಯೋದಲ್ಲಿ ಹೇಳಿದ್ದಾನೆ ಎನ್ನಲಾಗಿದೆ.
ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಭಾರತದ ಆಕ್ರಮಣದಿಂದ ಪಂಜಾಬ್ ಅನ್ನು ವಿಮೋಚನೆಗಾಗಿ ಪ್ರಯತ್ನಿಸುತ್ತಿದ್ದೇವೆ. ಶರ್ಮಾ, ನಿಮ್ಮ ಸರ್ಕಾರವು ಸಿಖ್ಖರನ್ನು ಹಿಂಸಿಸಿ ಕಿರುಕುಳ ನೀಡಲು ಹೋದರೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುವುದು”ಎಂದು ಆಡಿಯೋದಲ್ಲಿ ಬೆದರಿಕೆ ಹಾಕಲಾಗಿದೆ.








