‘ಖರ್ಗೆ ದುಕಾನ್’ ಸಂಪೂರ್ಣ ಬಂದ್ ಆಗಲಿದೆ : ಕಟೀಲ್
ಕಲಬುರಗಿ : ಪರಿಷತ್ ಚುನಾವಣೆಯಲ್ಲಿ ಕಲಬುರಗಿಯಲ್ಲಿನ ಖರ್ಗೆ ದುಕಾನ್ ಬಂದ್ ಆಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕಲಬುರಗಿಯಲ್ಲಿ ಜನ ಸ್ವರಾಜ್ ಸಮೇವೇಶವನ್ನು ಬಿಜೆಪಿ ಹಮ್ಮಿಕೊಂಡಿತ್ತು.
ಈ ಸಭೆಗೆ ಚಾಲನೆ ನೀಡಿ ಮಾತನಾಡಿದ ಕಟೀಲ್, ಕಾಂಗ್ರೆಸ್ ಹಿರಿಯ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಜನ ಸ್ವರಾಜ್ ಯಾತ್ರೆಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಹೀಗಾಗಿ ಕಲಬುರಗಿಯ ಲೂಟಿ ಗ್ಯಾಂಗ್ ಖರ್ಗೆ ಅಂಗಡಿ ಬಂದ್ ಆಗಲಿದೆ.
ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಖರ್ಗೆಯನ್ನು ಸೋಲಿಸಿದ್ರಿ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಣ್ಣ ಖರ್ಗೆಯನ್ನ ಸೋಲಿಸಿ ಊರು ಬಿಡಿಸಿದ್ರಿ.
ಖರ್ಗೆ ಗ್ಯಾಂಗ್ ಗೆ ಬುದ್ಧಿ ಕಲಿಸಿದ ಕಲಬುರಗಿ ಜನತೆಗೆ ಅಭಿನಂದನೆ ಎಂದಿದ್ದಾರೆ.