ದಚ್ಚುಗೆ ಕಿಚ್ಚ ಸೋದರ ಮಾವ ಅಂತೆ; ಒಳ್ಳೆ ಹುಡ್ಗ ಪ್ರಥಮ್ ಕೊಟ್ರು ಹೊಸ ಟೈಟಲ್
ಬೆಂಗಳೂರು, ಅಗಸ್ಟ್ 28: ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದು, ಬಳಿಕ ವೈಷಮ್ಯ ಬೆಳೆಸಿಕೊಂಡು ದೂರವಾಗಿರುವ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಲೆಕ್ಕಾಚಾರದ ಪ್ರಕಾರ ಸೋದರಮಾವ – ಸೋದರ ಅಳಿಯ ಆಗಬೇಕಂತೆ. ಹೀಗೆಂದು ಟ್ವೀಟ್ ಮಾಡಿದವರು ನಟ ಹಾಗೂ ಬಿಗ್ಬಾಸ್ ವಿನ್ನರ್ ಪ್ರಥಮ್
ನಿನ್ನೆ ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಆಪ್ತರು ಶುಭಕೋರಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದರ್ ಇಂಡಿಯಾ ಸುಮಲತಾ ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರೆ, ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿ ಆರೋಗ್ಯ ಮತ್ತು ಸಂತೋಷ ಸಿಗಲಿ. ಈ ದಿನ ನಿಮ್ಮ ಪಾಲಿಗೆ ಅದ್ಭುತ ದಿನವಾಗಲಿ ಎಂದು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದರು.
ನಟ ಪ್ರಥಮ್ ಈ ಎರಡು ಟ್ವೀಟ್ ಗೆ ಸಂಬಂಧದ ಟಚ್ ಅಪ್ ಕೊಟ್ಟು ದರ್ಶನ್ ಗೆ ಸುದೀಪ್ ಸೋದರಮಾವ ಆಗ್ತಾರೆ. ನಮ್ಮ ಸಿನಿಮಾ ಇಂಡಸ್ಟ್ರಿ ಒಂದೇ ಕುಟುಂಬ ಎನ್ನುವುದು ನಿಜ ಎಂದು ಟ್ವೀಟ್ ಮಾಡಿದ್ದಾರೆ.
ದರ್ಶನ್ ಅವ್ರಿಗೆ ಸುಮಲತಾ ಮದರ್ ಇಂಡಿಯಾ, ಸುದೀಪ್ ಅವ್ರಿಗೆ ಅಕ್ಕ. ಅಂದ್ರೆ ದರ್ಶನ್ ಸರ್ ಗೆ ಸುದೀಪ್ ಸರ್ ಲೆಕ್ಕಾಚಾರ ಪ್ರಕಾರ ಸೋದರಮಾವ ಆಗ್ತಾರೆ. ಅಂತು ಇಂಡಸ್ಟ್ರಿ ಒಂದೇ ಕುಟುಂಬ ಅನ್ನೋದು ನಿಜ ಆಯ್ತು ! ಹ್ಯಾಪಿ ಬರ್ತ್ ಡೇ ಸುಮಲತಾ ದೊಡ್ಡಮ್ಮ! ನಮ್ಮಮ್ಮನಿಗಿಂತ ಸ್ವಲ್ಪ ದೊಡ್ಡವರು ನೀವು.ಹಾಗಾಗಿ ನಾನು ದೊಡ್ಡಮ್ಮನ್ನ ಮಾಡ್ಕೊಂಡೆ ಎಂದು ನಟ ಪ್ರಥಮ್ ಟ್ವೀಟ್ ಮಾಡಿದ್ದಾರೆ.