ಭಾರತದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ವಿಕ್ರಾಂತ್ ರೋಣ , ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದ್ದು ಸುಮಾರು 8 ಕ್ಕೂ ಅಧಿಕ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.. ಈ ಸಿನಿಮಾದ ರಾರಾ ರಕ್ಕಮ್ಮ ಹಾಡು ಇತ್ತೀಚೆಗೆ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡಿದೆ..
ಅಂದ್ಹಾಗೆ ಹಾಡಿನಲ್ಲಿ ಕಿಚ್ಚ ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ಮಸ್ತ್ ಸ್ಟೆಪ್ಸ್ ಹಾಕಿದ್ದು ಕಿಚ್ಚನ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ.. ಇದೀಗ ಹಾಡಲಿಲ್ಲ ಅಷ್ಟೇ ಅಲ್ಲ ಕಿಚ್ಚ ಸುದೀಪ್ ಅವರು ಮೊಟ್ಟ ಮೊದಲ ರೀಲ್ಸ್ ಮಾಡಿದ್ದು ಅಲ್ಲೂ ಭರ್ಜರಿಯಾಗಿ ರಕ್ಕಮ್ಮ ಹಾಡಿಗೆ ಸ್ಟೆಪ್ಸ್ ಹಾಕಿ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದಾರೆ..
ಅಂದ್ಹಾಗೆ ಬರೀ ಡ್ಯಾನ್ಸ್ ಅಷ್ಟೇ ಮಾಡಿಲ್ಲ.. ಬದಲಾಗಿ ಕಿಚ್ಚ ಜಾಕ್ವೆಲಿನ್ ಜೊತೆಗೆ ಕನ್ನಡದಲ್ಲಿ ಮಾತನಾಡಿದ್ದಾರೆ ಕೂಡ.. ಜಾಕ್ವೆಲಿನ್ ಫರ್ನಾಂಡೀಸ್ ಗೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ಸುದೀಪ್, ನಟಿಯನ್ನು ಕನ್ನಡದಲ್ಲೇ ಮಾತನಾಡಿಸಿದ್ದಾರೆ. ಜಾಕ್ವೆಲಿನ್ ಮನವಿ ಮೇರೆಗೆ ‘ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಈ ರೀಲ್ ಸಖತ್ ವೈರಲ್ ಆಗ್ತಿದೆ..
ಕರ್ನಾಟಕದ ನನ್ನ ಎಲ್ಲಾ ಸ್ನೇಹಿತರಿಗೆ ನನ್ನ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದೀನಿ ಅಂತಾ ಹೇಳುವಂತೆ ಸುದೀಪ್, ಹೇಳಿದ್ದರು. ಅಂತೆಯೇ ಜಾಕ್ವೆಲಿನ್ ಕೂಡ ಕನ್ನಡದಲ್ಲೇ ಮಾತನಾಡಿದ್ದಾರೆ. ಸಿನಿಮಾ ಜೂನ್ 28 ಕ್ಕೆ ರಿಲೀಸ್ ಆಗಲಿದೆ..