ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸಿದ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡುವುದು ಹಲವಾರು ವಿಶ್ವ ವಿದ್ಯಾಲಯಗಳ(University) ಪದ್ಧತಿಯಾಗಿದೆ. ಹೀಗಾಗಿ ತುಮಕೂರು (Tumkur)ವಿಶ್ವ ವಿದ್ಯಾಲಯ ಮನರಂಜನೆ ವಿಭಾಗದಲ್ಲಿ ಸಾಧನೆ ಸಲ್ಲಿಸಿದ್ದ ನಟ ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಆದರೆ, ಕಿಚ್ಚ ಸುದೀಪ್(Sudeep) ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ಮನರಂಜನೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ನನಗಿಂತಲೂ ಹಿರಿಯ ಸಾಧಕರಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿ ಎಂದು ವಿನಮ್ರವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕರು ಗೌರವ ಪೂರ್ವಕವಾಗಿಯೇ ಈ ಗೌರವವನ್ನು ಸ್ವೀಕರಿಸಿದ್ದಾರೆ. ವಿಶ್ವ ವಿದ್ಯಾಲಯವು ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಆ ಗೌರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ವಿಶ್ವ ವಿದ್ಯಾಲಯವು ಸುದೀಪ್ ಅವರಿಗೆ ಕರೆ ಮಾಡಿ ಗೌರವ ಡಾಕ್ಟರೇಟ್ (Doctorate) ಆಯ್ಕೆಯ ವಿಷಯ ತಿಳಿಸಿದಾಗ, ‘ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ವಿನಮ್ರವಾಗಿಯೇ ಗೌರವವನ್ನು ನಿರಾಕರಿಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಈ ಹಿಂದೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕೂಡ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಈಗ ಆ ಸಾಲಿಗೆ ಸುದೀಪ್ ಬಂದು ನಿಂತಿದ್ದಾರೆ. ಈಗ ಅಭಿಮಾನಿಗಳು ಕಿಚ್ಚನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದು ರಾಹುಲ್ ದ್ರಾವಿಡ್ ಓದಿ ಪಡೆಯುವ ಡಾಕ್ಟರೇಟ್ ಶ್ರೇಷ್ಠ ಅಂದಿದ್ದರು.