RCB ಕೆಟ್ಟ ದಿನಗಳಲ್ಲಿ ಇದು ಒಂದು – ಕಿಚ್ಚ ಸುದೀಪ್ ಬೇಸರ..!
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನಟನೆ ಬಿಟ್ಟರೆ ಕುಕಿಂಗ್ ಹಾಗೂ ಕ್ರಿಕೆಟ್ ಬಗ್ಗೆ ತುಂಬಾನೆ ಆಸಕ್ತಿ ಇದೆ ಅವರ ಹಾಬಿ ಕೂಡ ಎನ್ನುವ ವಿಚಾರ ಎಲ್ರಿಗೂ ಗೊತ್ತೆ ಇದೆ. ಇನ್ ಫ್ಯಾಕ್ಟ್ ಕಿಚ್ಚ ಸುದೀಪ್ ಸಹ ಉತ್ತಮ ಕ್ರಿಕೆಟ್ ಆಟಗಾರ ಅನ್ನೋದು ಗತ್ತಿದೆ. ಒಂದು ವೇಳೆ ನಟ ಆಗಿರಲಿಲ್ಲ ಅಂದ್ರೆ ಕ್ರಿಕೆಟ್ ಆಟಗಾರರಾಗಿರುತ್ತಿದ್ದರು ಅನ್ನಿಸುತ್ತದೆ.
ಟೀಮ್ ಇಂಡಿಯಾ ಇರಲಿ ಐಪಿಎಲ್ ಮ್ಯಾಚ್ ಇರಲಿ ಎಂತಹದ್ದೇ ಬ್ಯುಸಿ ಶೆಡ್ಯೂಲ್ ನಲ್ಲಿ ಕಿಚ್ಚ ಸುದೀಪ್ ಅವರು ಮಿಸ್ ಮಾಡಿಕೊಳ್ಳೋದಿಲ್ಲ. ಹಾಗೆಯೇ ಇತ್ತೀಚೆಗೆ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಬೆಂಗಳೂರು ಸೋತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಅವರು ಚೈನ್ನೈ ಟೀಂ ಉತ್ತಮ ಪ್ರದರ್ಶನ ನೀಡಿದೆ ಎಂದಿದ್ದಾರೆ. ಇದೇ ವೇಳೆ RCBಯ ಕೆಟ್ಟ ದಿನಗಳಲ್ಲಿ ಇದು ಒಂದು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು. ನಮ್ಮ ಹೃದಯ ಹಾಗೂ ಶುಭಾಶಯ ಯಾವತ್ತೂ ಆರ್ ಸಿಬಿ ಜೊತೆಗೆ ಇರುತ್ತದೆ. ಮುಂದಿನ ಪಂದ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂ ಡರ್ ರವೀಂದ್ರ ಜಡೇಜಾ ಮೋಡಿ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿರುವ ಕಿಚ್ಚ, ತುಂಬಾ ಅದ್ಭುತವಾಗಿ ಆಡಿದ್ದೀರಿ, ನಿಜವಾಗಿಯೂ ನೀವು ಸೂಪರ್ ಮ್ಯಾನ್ ರೀತಿ ಕಂಡಿರಿ, ಸರ್ವಶಕ್ತ ಎಂದು ಹೊಗಳಿದ್ದಾರೆ.








