ಸದ್ಯಕ್ಕೆ ಸೌತ್ ಸಿನಿಮಾಗಳದ್ದೇ ದರ್ಬಾರ್,.. ಪ್ಯಾನ್ ಇಂಡಿಯಾದ್ದೇ ಹವಾ..!! ಕಿಚ್ಚ ಸುದೀಪ್ ಅವರು ತಮ್ಮ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ಕೆಲ ದಿನಗಳ ಹಿಂದೆ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಅವರ ನಡುವಿನ ಭಾಷಾ ವಿವಾದ ವಾಕ್ಸಮರದ ಬಗ್ಗೆ ಈಗ ಮಾತನಾಡಿದ್ದಾರೆ..
ಸಂದರ್ಶನವೊಂದ್ರಲ್ಲಿ ಪ್ರತಿಕ್ರಿಯಯೆ ನೀಡಿರುವ ಕಕಿಚ್ಚ ಅಂದು ನಮ್ಮಿಬ್ಬರ ನಡುವೆ ಯಾರೋ ಮೂರನೇ ವ್ಯಕ್ತಿ ಅನವಶ್ಯಕವಾಗಿ ವಿವಾದ ತಂದಿಟ್ಟಿದ್ದರು ಎಂದು ಅನುಮಾನ ಹೊರಹಾಕಿದ್ಧಾರೆ.
ನನಗೆ ಗೊತ್ತಿರುವ ಹಾಗೆ ಅಜಯ್ ದೇವಗನ್ ಯಾವತ್ತೂ ಹಿಂದಿಯಲ್ಲಿ ಟ್ವೀಟ್ ಮಾಡುವ ವ್ಯಕ್ತಿಯೇ ಅಲ್ಲ. ನನ್ನ ಮಾತನ್ನು ಯಾರೋ ತಪ್ಪಾಗಿ ಅರ್ಥ ಬರುವಂತೆ ಅಜಯ್ ದೇವಗನ್ ಅವರಿಗೆ ತಂದಿಟ್ಟಿದ್ದರು.
ಆದರೆ ನಾನು ಸ್ಪಷ್ಟನೆ ನೀಡಿದ ಕೂಡಲೇ ಅಜಯ್ ದೇವಗನ್ ರಿಟ್ವೀಟ್ ಮಾಡಿ ನನಗೆ ಉತ್ತರ ಸಿಕ್ಕಿತು ಎಂದು ಧನ್ಯವಾದ ಸಲ್ಲಿಸಿದರು. ಆ ಮೂರನೇ ವ್ಯಕ್ತಿ ಯಾರೋ ನನಗೆ ಗೊತ್ತಿರುವವರೇ ಆಗಿದ್ದಾರೆ. ಆದರೆ ಯಾರು ಎಂದು ನಾನು ಇಲ್ಲಿ ಖಚಿತವಾಗಿ ಹೇಳಲಾರೆ ಎಂದಿದ್ದಾರೆ.








