OTT ಯಲ್ಲಿ ರಿಲೀಸ್ ಆಗುತ್ತಾ ‘ವಿಕ್ರಾಂತ್ ರೋಣ’ : ಸಿನಿಮಾಗಾಗಿ ಭರ್ಜರಿ ಆಫರ್
ಫೆಬ್ರವರಿಯಲ್ಲಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಬೇಕಿತ್ತು.. ಆದ್ರೆ ಕೋವಿಡ್ ಹಾವಳಿಯಿಂದಾಗಿ RRR , ರಾಧೆ ಶ್ಯಾಮ್ ಸಿನಿಮಾ ಮಾದರಿಯಲ್ಲೇ ವಿಕ್ರಾಂತ್ ರೋಣ ಸಿನಿಮಾ ಕೂಡ ರಿಲೀಸ್ ಮೂಂದೂಡಿಕೆ ಆಗಬಹುದು ಎನ್ನಲಾಗ್ತಿದೆ..
ಈ ನಡುವೆ ರಾಧೆ ಶ್ಯಾಮ್ ಗೆ ಅಮೇಜಾನ್ 350 ಕೋಟಿ ರೂ ಆಫರ್ ನೀಡಿದ್ದು ಗೊತ್ತೇ ಇದೆ.. ಈಗ ಇದೇ ಮಾದರಿಯಲ್ಲೇ ವಿಕ್ರಾಂತ್ ರೋಣ ಸಿನಿಮಾಗೂ ಕೂಡ ಖ್ಯಾತ ಒಟಿಟಿ ಸಂಸ್ಥೆ ಭರ್ಜರಿ ಆಫರ್ ನೀಡಿದೆ ಎನ್ನಲಾಗಿದೆ..
ಹೌದು 3ಡಿ ತಂತ್ರಜ್ಞಾನದಲ್ಲಿ, ಭರ್ಜರಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣದ, ನೇರ ಪ್ರಸಾದ ಹಕ್ಕುಗಳಿಗಾಗಿ ಎರಡು ಓಟಿಟಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.
ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲೂ ನೇರವಾಗಿ ಓಟಿಟಿಯಲ್ಲಿ ಪ್ರಸಾರ ಮಾಡಲು ಓಟಿಟಿ ಆಫರ್ ನೀಡಿದ್ದು , ದಕ್ಷಿಣ ಭಾರತದ ಸಿನಿಮಾಗಳಲ್ಲೇ ಅತಿ ಹೆಚ್ಚು ಹಣದ ಆಫರ್ ಈ ಸಿನಿಮಾಗೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡ್ತಿದೆ..
ಇನ್ನೂ ಈ ಕುರಿತಾಗಿ ಮಾತನಾಡಿದ ಚಿತ್ರದ ನಿರ್ಮಾಪಕ ಜಾಕ್ ಮಂಜು, ಓಟಿಟಿಯಲ್ಲಿ ನೇರವಾಗಿ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ 2 ಓಟಿಟಿ ಸಂಸ್ಥೆಗಳು ಬಂದಿವೆ. ಒಬ್ಬರು ಈಗಾಗಲೇ ಇಂತಿಷ್ಟು ಹಣವನ್ನು ಕೊಡುವುದಾಗಿ ಹೇಳಿದ್ದಾರೆ. ದೊಡ್ಡ ಮೊತ್ತವನ್ನೇ ಆಫರ್ ಮಾಡಿದ್ದಾರೆ. ಆದ್ರೆ ವಿಕ್ರಾಂತ್ ರೋಣ ಚಿತ್ರವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವ ಉದ್ದೇಶ ಇದೆ. ಆ ಕಾರಣಕ್ಕಾಗಿ 3ಡಿ ತಂತ್ರಜ್ಞಾನದಲ್ಲಿ ಸಿನಿಮಾವನ್ನು ಮಾಡಲಾಗಿದೆ ಎಂದಿದ್ದಾರೆ. ಮೂಲಗಳ ಪ್ರಕಾರ ಸಿನಿಮಾಗೆ ಒಟಿಟಿಯಲ್ಲಿ 100 ಕೋಟಿ ಆಫರ್ ಸಿಕ್ಕಿದ್ಯಂತೆ. ಆದ್ರೆ ನಿಖರವಾಗಿ ಎಷ್ಟು ರೂಪಾಯಿಗಳ ಆಫರ್ ಇಟ್ಟಿದ್ದಾರೆ ಎಂಬುದನ್ನ ಬಹಿರಂಗ ಪಡಿಸಿಲ್ಲ..








